ಒಮಿಕ್ರಾನ್ ವ್ಯಾಪ್ತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಇದೀಗ ಒಟ್ಟಾರೆ 63 ದೇಶಗಳಲ್ಲಿ ಸೋಂಕು ಕಾಣಿಸಿದೆ. ಈ ತಳಿ ಡೆಲ್ಟಾದಷ್ಟು ಮಾರಕ ಅಲ್ಲವಾದರೂ ಅದಕ್ಕಿಂತ ಹೆಚ್ಚು ವೇಗದಲ್ಲಿ ಹರಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಕೊರೋನಾ ಸೋಂಕಿನಿಂದ ಬಚಾವ್ ಆಗಲು ಈಗಾಗಲೇ ಹಾಕಿಸಿರುವ ಲಸಿಕೆಯ ದಕ್ಷತೆಯನ್ನು ಒಮಿಕ್ರಾನ್ ಕಡಿಮೆ ಮಾಡುತ್ತದೆ. ಡೆಲ್ಟಾ ಅತಿ ವೇಗವಾಗಿ ಹರಡುತ್ತದೆ ಎನ್ನುವ ಭೀತಿ ಇತ್ತು, ಆದರೆ ಒಮಿಕ್ರಾನ್ ಡೆಲ್ಟಾ ಮೀರಿಸಿ ವೇಗದಲ್ಲಿ ಹರಡುತ್ತದೆ ಎಂದು ಹೇಳಿದೆ.ಒಮಿಕ್ರಾನ್ ಲಸಿಕೆ ದಕ್ಷತೆ ಕಡಿಮೆ ಮಾಡುತ್ತದೆ. ಆದರೆ ಇದರ ಲಕ್ಷಣಗಳು ಅಷ್ಟೊಂದು ಗಂಭೀರವಾಗಿಲ್ಲ. ಕೆಲವರಿಗೆ ಸೌಮ್ಯ ಲಕ್ಷಣಗಳು ಕಾಣಿಸಿದರೆ, ಹಲವರಿಗೆ ಲಕ್ಷಣಗಳೇ ಕಾಣಿಸಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.