ಶ್ರೀನಿವಾಸ್ ಪ್ರಸಾದ್ ನೋಸ್ ವಾಟ್ ಟು ಡು, ವಾಟ್ ನಾಟ್ ಡು: ಸಚಿವ ಮಹಾದೇವ್

ಗುರುವಾರ, 13 ಅಕ್ಟೋಬರ್ 2016 (20:08 IST)
ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಸಚಿವ ಮಹಾದೇವ ಪ್ರಸಾದ್, ಶ್ರೀನಿವಾಸ್ ಪ್ರಸಾದ್ ಅವರು ಹಿರಿಯ ರಾಜಕಾರಣಿಗಳು. ಹೀ ನೋಸ್ ವಾಟ್ ಟು ಡು, ವಾಟ್ ನಾಟ್ ಡು ಎಂದು ಖಾರವಾಗಿ ಹೇಳಿದರು. 
 
ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ವಿರುದ್ಧ ರೂಪಿಸಿದ್ದ ಷಡ್ಯಂತ್ರದ ಕಾರಣದಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ನೇರವಾಗಿ ಆರೋಪಿಸಿ, ಅಕ್ಟೋಬರ್ 17 ರಂದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ನಿರ್ಧರಿಸಿದ್ದಾರೆ. 
 
ಜಂಬೂ ಸವಾರಿಯಲ್ಲಿ ಭಾಗವಹಿಸಿದ ದಸರಾ ಆನೆಗಳು, ಕಾವಾಡಿಗಳು ಹಾಗೂ ಮಾವುತರ ಕುಟುಂಬದವರಿಗೆ ಮರಳಿ ಕಾಡಿಗೆ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಚಿವ ಮಹಾದೇವ ಪ್ರಸಾದ್, ಈ ಬಾರಿ ಯಶಸ್ವಿಯಾಗಿ ದಸರಾ ಮುಗಿದಿದೆ. ಈ ಹಿನ್ನೆಲೆಯಲ್ಲಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದರು.  
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ