SSLC ಪರೀಕ್ಷೆ : ನಕಲಿಗೆ ಸಹಕರಿಸಿದ 5 ಶಿಕ್ಷಕರ ಮೇಲೆ ಕೇಸ್

ಗುರುವಾರ, 25 ಜೂನ್ 2020 (17:37 IST)
ಕೊರೊನಾ ವೈರಸ್ ಭೀತಿಯ ನಡುವೆಯೇ ಆರಂಭಗೊಂಡಿರುವ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ನಕಲು ಕಾಟ ತಪ್ಪಿಲ್ಲ.

ಖಾಸಗಿ ಶಾಲೆಗಳ 4 ಜನ ಶಿಕ್ಷಕರು ಹಾಗೂ ಪರೀಕ್ಷಾ ಕೇಂದ್ರದ ಕೊಠಡಿಯ ಮೇಲ್ವಿಚಾರಕನೊಬ್ಬನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಹಾವೇರಿ ಜಿಲ್ಲೆಯ ಹಿರೇಕೆರೂರು ಪಟ್ಟಣದ ಸಂಗಮೇಶ್ವರ ಪ್ರೌಢಶಾಲೆಯಲ್ಲಿ ಈ ಘಟನೆ ನಡೆದಿದೆ.  

ತಹಶೀಲ್ದಾರ ಆರ್.ಎಚ್.ಭಾಗವಾನ ಪರೀಕ್ಷಾ ಕೇಂದ್ರಕ್ಕೆ ಹೋದಾಗ ಘಟನೆ ಬೆಳಕಿಗೆ ಬಂದಿದೆ. ತಹಸೀಲ್ದಾರ್ ರನ್ನು ಕಂಡೊಡನೇ ಶಿಕ್ಷಕರು, ಕೊಠಡಿ ಮೇಲ್ವಿಚಾರಕ ಓಡಿ ಹೋಗುತ್ತಿದ್ದರು. ಈ ಕುರಿತು ಹಿರೇಕೆರೂರು ಠಾಣೆಯಲ್ಲಿ ಕೇಸ್ ದಾಖಲಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ