ಸೋಮವಾರ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ

ಶನಿವಾರ, 7 ಆಗಸ್ಟ್ 2021 (15:46 IST)
ಬೆಂಗಳೂರು (ಆ. 7): 2020-21ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ (SSLC Result) ಇದೇ ಆಗಸ್ಟ್ 9ರ (august 9) ಸೋಮವಾರ ಪ್ರಕಟವಾಗಲಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಮೊದಲು ಇಂದು ಅಂದರೆ ಆಗಸ್ಟ್ 7ರಂದು ಫಲಿತಾಂಶ ಪ್ರಕಟವಾಗಲಿದೆ ಎನ್ನಲಾಗಿತ್ತು. ಆದರೆ, ಈ ಬಗ್ಗೆ ಸರ್ಕಾರದಿಂದ ಅನುಮೋದನೆ ಸಿಕ್ಕಿಲ್ಲದ ಹಿನ್ನಲೆ ಫಲಿತಾಂಶ ಪ್ರಕಟ ಇನ್ನೆರಡು ದಿನ ವಿಳಂಬ ಆಗಲಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದರು.

ಜೊತೆಗೆ ಸರ್ಕಾರದಲ್ಲಿ ಆದ ಬೆಳವಣಿಗೆಗಳಿಂದ ನೂತನ ಸಚಿವರ ನೇಮಕಾತಿ ಆದ ಬಳಿಕ ಫಲಿತಾಂಶ ಪ್ರಕಟಕ್ಕೆ ಇಲಾಖೆ ಮುಂದಾಗಲಿದೆ ಎಂಬ ಮಾತು ಕೇಳಿ ಬಂದಿತು. ಮುಖ್ಯಮಂತ್ರಿಗಳು (Basavaraja Bommai) ಇಂದು ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದು, ಬಿ ಸಿ ನಾಗೇಶ್ (BC Nagesh) ಅವರನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಚಿವರನ್ನಾಗಿ ನೇಮಕ ಮಾಡಲಾಗಿತ್ತು. ನೂತನ ಸಚಿವರೇ ಸೋಮವಾರ ಫಲಿತಾಂಶ ಪ್ರಕಟ ಮಾಡಲಿದ್ದಾರೆ ಎನ್ನಲಾಗಿದೆ.
ಈಗಾಗಲೇ ಮೌಲ್ಯಮಾಪನ ಕಾರ್ಯ ಎಲ್ಲ ಮುಗಿದಿದ್ದು, ಫಲಿತಾಂಶ ಪ್ರಕಟ ಮಾಡಲು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ತಯಾರಿ ನಡೆಸಿದ್ದು, ಸೋಮವಾರ ಅಧಿಕೃತವಾಗಿ ಫಲಿತಾಂಶ ಪ್ರಕಟವಾಗಿಲಿದೆ ಎಂದು ಶಿಕ್ಷಣ ಇಲಾಖೆ ಮೂಲಗಳು ಖಚಿತ ಮಾಹಿತಿ ನೀಡಿದೆ.
ಈ ಹಿಂದೆಯೇ ಆಗಸ್ಟ್ 10ರೊಳಗೆ ಫಲಿತಾಂಶ ಪ್ರಕಟ ಮಾಡಲಾಗುವುದು ಎಂದು ಮಾಜಿ ಶಿಕ್ಷಣ ಸಚಿವರಾಗಿದ್ದು ಸುರೇಶ್ ಕುಮಾರ್ ತಿಳಿಸಿದ್ದರು. ಈಗಾಗಲೇ ಮೌಲ್ಯ ಮಾಪನ ಪೂರ್ಣಗೊಂಡಿದ್ದು, ಫಲಿತಾಂಶ ಪ್ರಕಟಣೆಗೆ ಸಕಲ ತಯಾರಿಯನ್ನು ಶಿಕ್ಷಣ ಇಲಾಖೆ ನಡೆಸಿದೆ. ಆದರೆ, ಸರ್ಕಾರದಲ್ಲಿ ನಡೆದ ಬದಲಾವಣೆಗಳಿಂದಾಗಿ ಫಲಿತಾಂಶ ವಿಳಂಬವಾಯಿತು. ನೂತನ ಸಚಿವರು ಇಂದು ಇಲಾಖೆ ಜವಾಬ್ದಾರಿ ವಹಿಸಿಕೊಂಡ ಬಳಿಕ ಅನುಮೋದನೆ ನೀಡಲಿದ್ದು, ಸೋಮವಾರ  ಆಗಸ್ಟ್ 9ರಂದು ಪರೀಕ್ಷೆ ಬರೆದಿದ್ದ 8 ಲಕ್ಷದ 71 ಸಾವಿರ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟ ಮಾಡಲಿದ್ದಾರೆ.
ಕೋವಿಡ್ ಆತಂಕದಲ್ಲೂ ಸಕಲ ಮುನ್ನೆಚ್ಚರಿಕಾ ಕ್ರಮವಹಿಸಿ ಶಿಕ್ಷಣ ಇಲಾಖೆ ಕಳೆದ ಜು. 19 ಮತ್ತು 22 ರಂದು ಎಸ್ಎಸ್ಎಲ್ಸಿ ಪರೀಕ್ಷೆಯನ್ನು ನಡೆಸಿತ್ತು. ಜುಲೈ 19ರಂದು ಮೊದಲ ದಿನ ನಡೆದ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯಗಳಿಗೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳು ಜು. 22ರಂದು ಪ್ರಥಮ, ದ್ವಿತೀಯ ಮತ್ತು ತೃತೀಯ ಭಾಷೆಗಳ ಪರೀಕ್ಷೆ ಬರೆದಿದ್ದರು. ಬಹು ಆಯ್ಕೆಯ ಉತ್ತರ ಗಳೊಂದಿಗೆ ಸರಳವಾಗಿ 40 ಅಂಕಗಳಿಗೆ ಪರೀಕ್ಷೆಯನ್ನು ನಡೆಸಲಾಗಿತ್ತು.
ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟವಾದ ಬಳಿಕ ಫಲಿತಾಂಶವನ್ನು ನೀವು kseeb.kar.nic.in ಅಥವಾ karresults.nic.in ವೆಬ್ಸೈಟ್ನಲ್ಲಿ ವೀಕ್ಷಿಸಬಹುದು. ಇದಷ್ಟೇ ಅಲ್ಲದೆ, examresults.net ಮತ್ತು indiaresults.com ವೆಬ್ಸೈಟ್ನಲ್ಲಿ ಕೂಡ ರಿಸಲ್ಟ್ ನೋಡಬಹುದು.

ವೆಬ್ಸೈಟ್ ಓಪನ್ ಮಾಡಿ ನಂತರ ಹೋಂ ಪೇಜ್ನಲ್ಲಿ ಎಸ್ಎಸ್ಎಲ್ಸಿ ರಿಸಲ್ಟ್ ಎಂಬ ಆಯ್ಕೆಯನ್ನು ಒತ್ತಿ.
•ನಿಮ್ಮ ಪರೀಕ್ಷೆಯ ರೋಲ್ ನಂಬರ್ ಮತ್ತು ಪೇಜ್ನಲ್ಲಿ ಕೇಳುವ ಮಾಹಿತಿಯನ್ನು ಭರ್ತಿ ಮಾಡಿ.
•ಹಾಲ್ ಟಿಕೆಟ್ನ ಮಾಹಿತಿಯನ್ನು ವೆಬ್ಸೈಟ್ನಲ್ಲಿ ವೇರಿಫೈ ಮಾಡಿಕೊಳ್ಳಿ.
•ಆಗ ನಿಮ್ಮ ಪರೀಕ್ಷೆ ಫಲಿತಾಂಶ ಸಿಗುತ್ತದೆ.
•ನಂತರ ಆ ಫಲಿತಾಂಶವನ್ನು ಪಿಡಿಎಫ್ ಫಾರ್ಮಾಟ್ನಲ್ಲಿಯೇ ಡೌನ್ಲೋಡ್ ಮಾಡಿಕೊಳ್ಳಿ. ಹಾಗೇ, ಒಂದು ಕಾಪಿಯನ್ನು ಪ್ರಿಂಟ್ ತೆಗೆದಿಟ್ಟುಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ