ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ

ಗುರುವಾರ, 13 ಜುಲೈ 2017 (13:18 IST)
\ಎಸ್ಎಸ್ಎಲ್`ಸಿ ಪೂರಕ ಪರೀಕ್ಷಾ ಫಲಿತಾಂಶ ಪ್ರಕಟವಾಗಿದೆ. ಇವತ್ತು ಬೆಳಗ್ಗೆ ವೆಬ್ ಸೈಟ್`ನಲ್ಲಿ ಪೂರಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ. ನಾಳೆ ಬೆಳಗ್ಗೆ 10 ಗಂಟೆಗೆ ಎಲ್ಲ ಪ್ರೌಢಶಾಲೆಗಳಲ್ಲಿ ಫಲಿತಾಂಶ ಪ್ರಕಟಿಸಲಲಾಗುತ್ತೆ.

2,42,951 ವಿದ್ಯಾರ್ಥಿಗಳು ಪೂರಕ ಎಸ್ಸೆಸ್ಸೆಎಲ್ಸಿ ಪರೀಕ್ಷೆ ಬರೆದಿದ್ದರು. ಇದರಲ್ಲಿ 1,23,443 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಶೇ. 50.81 ರಷ್ಟು ವಿದ್ಯಾರ್ಥಿಗಳು ಪೂರಕ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ ಎಂದು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ತಿಳಿಸಿದೆ.

>>ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ.. http://karresults.nic.in  http://sslc.kar.nic.in 

ಪೂರಕ ಪರೀಕ್ಷೆಯ ಫಲಿತಾಂಶ ಸರ್ಕಾರಿ ವೆಬ್ ಸೈಟ್`ನಲ್ಲಿ ಮಾತ್ರ ನೋಡಬಹುದಾಗಿದೆ. ಈ ಹಿಂದೆ ಖಾಸಗಿ ವೆಬ್ ಸೈಟ್`ಗಳಲ್ಲೂ ಫಲಿತಾಂಸ ಪ್ರಕಟವಾಗುತ್ತಿತ್ತು. ಆದರೆ, ಕೆಲ ಗೊಂದಲದ ಹಿನ್ನೆಲೆ ಖಾಸಗಿ ವೆಬ್ ಸೈಟ್`ಗಳಲ್ಲಿ ಫಲಿತಾಂಶ ಪ್ರಕಟಿಸಲಾಗುತ್ತಿಲ್ಲ.

http://karresults.nic.in  http://sslc.kar.nic.in ವೆಬ್ ಸೈಟ್`ಗಳಲ್ಲಿ ಫಲಿತಾಶ ನೋಡಬಹುದಾಗಿದೆ.

ವೆಬ್ದುನಿಯಾವನ್ನು ಓದಿ