ನಾಳೆಯಿಂದ ಕಲಾಕೃತಿಗಳ ಪ್ರದರ್ಶನಕ್ಕೆ ವೇದಿಕೆ ಸಜ್ಜು

ಶನಿವಾರ, 26 ಮಾರ್ಚ್ 2022 (19:32 IST)
ಸಿಲಿಕಾನ್ ಸಿಟಿಯಲ್ಲಿ ನಡೆಯುವ 19 ನೇ ಚಿತ್ರಸಂತೆಗೆ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗ್ತಿದೆ. ಕಳೆದ ಎರಡು ವರ್ಷದಿಂದ ಚಿತ್ರಸಂತೆ ಕೇವಲ ಆನ್ ಲೈನ್ ನಲ್ಲಿ ಮಾತ್ರ ನಡೆಯುತ್ತಿತ್ತು. ಆದ್ರೆ ಈಗ ಭೌತಿಕವಾಗಿ ಚಿತ್ರಸಂತೆ ನಡೆಯಲಿದೆ . ಹಾಗಾಗಿ ನಾಳೆ ನಡೆಯುವ ಚಿತ್ರಸಂತೆಗೆ ಚಿತ್ರಕಲಾ ಪರಿಷತ್ ಸಜ್ಜಾಗಿದೆ.ಕಳೆದ ಬಾರಿ ಕೊರೊನಾದಿಂದ ಚಿತ್ರಸಂತೆ ಸರಿಯಾಗಿ ನಡೆದಿದಿಲ್ಲ. ಆದ್ರೆ ಈ ಬಾರಿ ನಡೆಯುವ  ಚಿತ್ರಸಂತೆ  ನೋಡುಗರನ್ನ ಸೆಳೆಯುವುದಕ್ಕೆ ಸಜ್ಜಾಗ್ತಿದೆ. 19 ನೇ ಚಿತ್ರಸಂತೆಗೆ ಈಗಾಗಲೇ ಪೂರ್ವ ಸಿದ್ಧತೆ ಕೂಡ ಮಾಡಿಕೊಳ್ಳಲಾಗಿದೆ. ಇನ್ನು ನಾಳೆ ನಡೆಯುವ ಚಿತ್ರಸಂತೆಯನ್ನ ಯೋಧರಿಗೆ ಸಮರ್ಪಣೆ ಮಾಡಲಾಗಿದೆ. . ಈ ಚಿತ್ರಸಂತೆಯನ್ನ ನಾಳೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಉದ್ಘಾಟನೆ ಮಾಡಲಿದ್ದಾರೆ. 1500 ಕಲಾವಿದರು ಸಹ ಭಾಗಿಯಾಗಲಿದ್ದಾರೆ. ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಗೋವಾ, ಮಹಾರಾಷ್ಟ್ರ , ಪಶ್ಚಿಮ ಬಂಗಾಳ ಸೇರಿದಂತೆ ಹಲವು ಭಾಗಗಳಿಂದ ಕಲಾವಿದರು ಈ ಚಿತ್ರಸಂತೆ ಭಾಗವಹಿಸಿ ತಮ್ಮ ಕಲಾಕೃತಿಗಳನ್ನ ಪ್ರದರ್ಶನಕ್ಕೆ ಮಾಡಲಿದ್ದಾರೆಈ ಚಿತ್ರಸಂತೆಯಲ್ಲಿ ಕಲಾವಿದರ ಕಲಾಕೃತಿಗಳನ್ನ ಮಾರಾಟಮಾಡಲು ಒಂದು ಉತ್ತಮ ವೇದಿಕೆಯನ್ನ ಸಜ್ಜು ಮಾಡಿಕೊಟ್ಟಿದೆ. ಕೊರೊನಾ ಇಲ್ಲದ ಕಾರಣ ಅದ್ಧೂರಿಯಾಗಿ ಈ ಬಾರಿ  ಚಿತ್ರಸಂತೆ ಮಾಡಲಾಗ್ತಿದೆ.  ಈ ಬಾರಿ ಐವರ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗ್ತದೆ. ಜೊತೆಗೆ ನಗದು ಹಣವನ್ನ ಸಹ ನೀಡಲಾಗ್ತದೆ. ನಾಳೆ ರಸ್ತೆ ಉದ್ದಕ್ಕೂ ಸ್ಟಾಲ್ ಗಳನ್ನ ಕೂಡ ಇಡಲು ಏರ್ಪಡಿಸಲಾಗಿದೆ. ನಾಳೆ ಕುಮಾರ ಕೃಪಾ ರಸ್ತೆಯಲ್ಲಿ ಕಾಲಿಡುವ ಮುನ್ನ ಯೋಚಿಸಬೇಕಾಗುತ್ತೆ.ನಾಳೆ ರಸ್ತೆಯಲ್ಲಿ ಕಾಲಿಡಲಾಗದ ಮಟ್ಟಿಗೆ ಟ್ರಾಫಿಕ್ ಜಾಮ್ ಸಂಭವಿಸಿರುತ್ತೆ. ಇನ್ನು ಕಲಾವಿದರು ತಮ್ಮ ಕಲಾಕೃತಿಗಳನ್ನ ಪ್ರದರ್ಶಿಸಲು ಸಂತಸದಿಂದ ತಯಾರಿ ಮಾಡಿಕೊಂಡಿದ್ದಾರೆ.

ಇಷ್ಟು ದಿನ ಆಲ್ ಲೈನ್ ನಲ್ಲಿ ನಡೆಯುತ್ತಿದ್ದ ಚಿತ್ರ ಸಂತೆ ನಾಳೆ ಭೌತಿಕವಾಗಿ ನಡೆಯಲಿದೆ.ಬೆಳ್ಳಿಗೆ 8 ಗಂಟೆಯಿಂದ ರಾತ್ರಿ 8 ಗಂಟೆವರೆಗೂ ಚಿತ್ರಸಂತೆ ನಡೆಯಲಿದೆ. ಇನ್ನು ಸಾವಿರಾರು ಜನರು ಚಿತ್ರಸಂತೆಯಲ್ಲಿ ಭಾಗವಹಿಸಲಿದ್ದಾರೆ. ಚಿತ್ರಸಂತೆಯಲ್ಲಿ ತಮ್ಮಗೆ ಬೇಕಾದ   ಕಲಾಕೃತಿಗಳನ್ನ ಕೊಂಡುಕೊಳ್ಳಬಹುದು. ನಾಳೆ ಭಾನುವಾರವಾದರಿಂದ ವೀಕೆಂಡ್ ಮೂಡ್ ನಲ್ಲಿರುವವರು ಹೆಚ್ಚಿನ ಸಂಖ್ಯೆಯಲ್ಲಿ ಕುಮಾರ ಕೃಪಾ ರಸ್ತೆಗೆ ಕಲಾಕೃತಿಗಳನ್ನ ವೀಕ್ಷಣೆ ಮಾಡಲು ಬರಲಿದ್ದಾರೆ.ಒಟ್ನಲ್ಲಿ ಕಲಾವಿದರನ್ನ ಪ್ರೋತ್ಸಾಹಿಸುವ ಸಲುವಾಗಿ ಅವರಿಗಾಗಿ ಉತ್ತಮ ವೇದಿಕೆ ಸಜ್ಜಾಗಿದೆ. ನಾಳೆ ನಡೆಯುವ ಚಿತ್ರಸಂತೆ ನೋಡುಗರನ್ನ ಆಕರ್ಷಿಸಲು ತಯಾರಾಗಿದೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ