ಮಾರ್ಚ್ 7ಕ್ಕೆ ರಾಜ್ಯ ಬಜೆಟ್ ಮಂಡನೆ: ಗುರುವಾರದಿಂದಲೇ ಸಿದ್ದರಾಯಯ್ಯ ಸಿದ್ಧತೆ ಆರಂಭ

Sampriya

ಮಂಗಳವಾರ, 4 ಫೆಬ್ರವರಿ 2025 (17:34 IST)
ಬೆಂಗಳೂರು: ಮಾರ್ಚ್ 7 ರಂದು ರಾಜ್ಯ ಬಜೆಟ್ ಮಂಡನೆಯಾಗುವ ಸಾಧ್ಯತೆ ಇದೆ. ಇದೇ ಗುರುವಾರದಿಂದ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಸಿದ್ಧತೆ ಆರಂಭಿಸಲಿದ್ದಾರೆ. ಸದ್ಯ ಅವರು ವಿಶ್ರಾಂತಿಯಲ್ಲಿದ್ದಾರೆ.

ಫೆಬ್ರವರಿ 6ರಿಂದ 14ರ ತನಕ ಬಜೆಟ್ ಪೂರ್ವಭಾವಿ ಚರ್ಚೆ ನಿಗದಿಯಾಗಿದ್ದು, ಶಕ್ತಿ ಭವನದಲ್ಲಿ ವಿವಿಧ ಇಲಾಖೆಗಳ ಬೇಡಿಕೆಗಳ ಕುರಿತ ಬಜೆಟ್ ಸಿದ್ಧತಾ ಸಭೆ ನಡೆಯಲಿದೆ.

ಮಾರ್ಚ್ ಮೊದಲ ವಾರದಲ್ಲಿ ಜಂಟಿ ಅಧಿವೇಶನ ನಡೆಸಲು ಸರ್ಕಾರದ ಸಿದ್ಧತೆ ನಡೆಸಿದೆ. ಮಾರ್ಚ್ 3ರಂದು ರಾಜ್ಯಪಾಲರು ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಸಾಧ್ಯತೆ ಇದೆ. ಮುಂದಿನ ಕ್ಯಾಬಿನೆಟ್ ನಲ್ಲಿ ಬಜೆಟ್ ದಿನಾಂಕ, ಜಂಟಿ ಅಧಿವೇಶನ ದಿನಾಂಕ ಅಂತಿಮಗೊಳಿಸಲಿರುವ ಸರ್ಕಾರ ಅಧಿಕೃತ ಘೋಷಣೆ ಮಾಡಲಿದೆ.

ಎರಡು ದಿನಗಳ ಹಿಂದಷ್ಟೇ ಮಂಡಿ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಎರಡು ದಿನ ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದರು. ಅದರಂತೆ ಎರಡು ದಿನ ಸಿಎಂ ಅವರ ಎಲ್ಲಾ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ