ಮದ್ಯದ ಸ್ಲ್ಯಾಬ್ ನ ಹಾಲಿ ದರದ ಮೇಲೆ ಶೇ.6ರಷ್ಟು ಹೆಚ್ಚಳ. ಅಬಕಾರಿ ಇಲಾಖೆಗೆ 22,700 ಕೋಟಿ ಸಂಗ್ರಹಣೆ ಗುರಿ. ಪೆಟ್ರೋಲ್ ಮೇಲಿನ ತೆರಿಗೆ ಶೇ.32ರಿಂದ ಶೇ.35ಕ್ಕೆ ಏರಿಕೆ. ತೆರಿಗೆ ಹೊರೆಯಿಂದ ಪೆಟ್ರೋಲ್ ದರ ಲೀಟರ್ ಗೆ 1.60 ರೂ.ಏರಿಕೆ. ಡಿಸೇಲ್ ಮೇಲಿನ ತೆರಿಗೆ ದರ ಶೇ.21 ರಿಂದ ಶೇ.24ಕ್ಕೆ ಏರಿಕೆ. ತೆರಿಗೆ ಹೊರೆಯಿಂದ ಡಿಸೇಲ್ ಬೆಲೆ 1.59ರೂ. ಹೆಚ್ಚಳ ಮಾಡಲಾಗಿದೆ.
ಅಪಾರ್ಟ್ ಮೆಂಟ್ ನೋಂದಣಿ ಮುದ್ರಾಂಕ ಶುಲ್ಕ ಕಡಿತ. 20 ಲಕ್ಷಕ್ಕಿಂತ ಕಡಿಮೆ ಮೌಲ್ಯದ ಅಪಾರ್ಟ್ ಮೆಂಟ್ ಗೆ ಶೇ.5ರಿಂದ ಶೇ.2ಕ್ಕೆ ನೋಂದಣಿ ಮುದ್ರಾಂಕ ಶುಲ್ಕ ಕಡಿತ ಮಾಡಲಾಗಿದೆ.