ಸಾಲದ ಸುಳಿಯಲ್ಲಿ ರಾಜ್ಯ ಸರ್ಕಾರ

ಬುಧವಾರ, 2 ಮಾರ್ಚ್ 2022 (16:35 IST)
2020-21ರಲ್ಲಿ ರಾಜ್ಯ ಸರ್ಕಾರ ಒಟ್ಟು ಋಣ ಭಾರ 3,98,219 ಕೋಟಿ ರೂ. ತಲುಪಿತ್ತು. ಇನ್ನು ಪ್ರಸಕ್ತ 2021-22 ಸಾಲಿನಲ್ಲಿ ರಾಜ್ಯ ಸರ್ಕಾರ 71,332 ಕೋಟಿ ರೂ. ಸಾಲ ಮಾಡಲು ನಿರ್ಧರಿಸಿದೆ.ರಾಜ್ಯದ ಒಟ್ಟು ಸಾಲ ಹಾಗೂ ಋಣಭಾರ ಮಾರ್ಚ್ ಅಂತ್ಯಕ್ಕೆ 4,57,899 ಕೋಟಿ ರೂ‌.ಗೆ ಏರಿಕೆಯಾಗಲಿದೆ.
ಸಾಲದ ಮಧ್ಯೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Basavaraj Bommai ) ಬಜೆಟ್ ಮಂಡನೆಗೆ ಅಂತಿಮ ಸಭೆಗಳನ್ನ ನಡೆಸುತ್ತಿದ್ದಾರೆ.ಸಂಪನ್ಮೂಲ ಕೊರತೆಯ ಮಧ್ಯೆ ಬಜೆಟ್ ಮಂಡನೆ ಮಾಡಬೇಕಾಗಿದ್ದು, ಈ ಬಾರಿ ಬಜೆಟ್ ನಿರ್ವಹಣೆಗಾಗಿ ಇನ್ನಷ್ಟು ಸಾಲದ ಮೊರೆ ಹೋಗುವುದು ಅನಿವಾರ್ಯವಾಗಿದೆ.
ಮಾರ್ಚ್ 4ಕ್ಕೆ ಸಿಎಂ ಬೊಮ್ಮಾಯಿ ಮದ್ಯಾಹ್ನ 12:30ಕ್ಕೆ ಚೊಚ್ಚಲ ಬಜೆಟ್ ಮಂಡನೆ ಮಾಡಲಿದ್ದಾರೆ.ಈ ಬಾರಿಯೂ ಬಂಡವಾಳ ವೆಚ್ಚವನ್ನು ಭರಿಸಲು ಸಾಲದ ಮೊರೆಹೋಗುವ ಪರಿಸ್ಥಿತಿ ಎದುರಾಗಿದೆ.ಕಳೆದ ಎರಡು ವರ್ಷದಿಂದ ಕೋವಿಡ್ ಲಾಕ್‌ಡೌನ್ ಹೇರಿದ ಆರ್ಥಿಕ ಸಂಕಷ್ಟಕ್ಕೆ ಆದಾಯ ಮೂಲ ಕುಗ್ಗಿದೆ.ಕೇಂದ್ರ ಸರ್ಕಾರವೂ ರಾಜ್ಯಗಳಿಗೆ ಕಳೆದ ವರ್ಷದಿಂದ ಹೆಚ್ಚುವರಿ ಸಾಲ ಪಡೆಯಲು ಅನುಮತಿ ನೀಡಿದೆ.
 
2022-23 ಸಾಲಿನಲ್ಲಿ ರಾಜ್ಯದ ಒಟ್ಟು ಸಾಲ 5,12,585 ಕೋಟಿ ರೂ. ತಲುಪುವ ಅಂದಾಜಿಸಲಾಗಿದೆ. ಅದೇ 2023-24ಕ್ಕೆ ರಾಜ್ಯದ ಒಟ್ಟು ಸಾಲ ಅಂದಾಜು 5,73,790 ಕೋಟಿ ರೂ. ತಲುಪಲಿದೆ. ಅದೇ 2024-25ರಲ್ಲಿ ರಾಜ್ಯದ ಒಟ್ಟು ಸಾಲದ ಹೊರೆ 6,42,578 ಕೋಟಿ ರೂ.ಗೆ ತಲುಪುವ ಅಂದಾಜು ಮಾಡಲಾಗಿದೆ. 2022-23ರಲ್ಲಿ ರಾಜ್ಯ ಸರ್ಕಾರ ಸುಮಾರು 75,000-80,000 ಕೋಟಿ ರೂ. ಸಾಲ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. 2020-21 ಸಾಲಿಗೆ ಹೋಲಿಸಿದರೆ ಪ್ರಸಕ್ತ ವರ್ಷದಲ್ಲಿ ಸಾಲದ‌ ಪ್ರಮಾಣ ಸುಮಾರು 34% ಹೆಚ್ಚಳವಾಗಿದೆ. ಈ ಬಾರಿ ಸಾಲದ ಪ್ರಮಾಣ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ