ಮಠಗಳ ವಿರೋಧಕ್ಕೆ ಬೆಚ್ಚಿದ ಸರ್ಕಾರ: ಮಹಾಮಸ್ತಕಾಭಿಷೇಕ ವೇದಿಕೆಯಲ್ಲೇ ಕಾಂಗ್ರೆಸ್ ಶಾಸಕರಿಗೆ ಛೀಮಾರಿ?!
ಮೂಲಗಳ ಪ್ರಕಾರ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಸೇರಿದಂತೆ ಕೆಲವು ಸ್ವಾಮೀಜಿಗಳು ಕಾಂಗ್ರೆಸ್ ಶಾಸಕ ಅಭಯ ಚಂದ್ರ ಜೈನ್ ಸಮ್ಮುಖದಲ್ಲೇ ಸರ್ಕಾರದ ನಿರ್ಧಾರಕ್ಕೆ ಛೀಮಾರಿ ಹಾಕಿದರು ಎನ್ನಲಾಗಿದೆ.
ಮಠ, ದೇವಾಲಯಗಳಿಗೆ ರಾಜಕೀಯ ಬೆರೆಸುವುದಕ್ಕೆ ನಮ್ಮ ಸಹಮತವಿಲ್ಲ ಎಂದು ಹೆಗ್ಗಡೆ ಸೇರಿದಂತೆ ಹಲವರು ಕಟುವಾಗಿ ಮಾತನಾಡಿದರು ಎನ್ನಲಾಗಿದೆ. ಅತ್ತ ಪೇಜಾವರ ಶ್ರೀಗಳಿಂದಲೂ ಇದಕ್ಕೆ ವಿರೋಧ ವ್ಯಕ್ತವಾಯಿತು. ಈ ಎಲ್ಲಾ ಹಿನ್ನಲೆಯಲ್ಲಿ ಸರ್ಕಾರ ನಿರ್ಧಾರದಿಂದ ಹಿಂದೆ ಸರಿದಿದೆ.