ಬೆಳಗಾವಿ ಅಧಿವೇಶನದ ಹೊರಗೂ ಒಳಗೂ ಸರ್ಕಾರಕ್ಕೆ ಪ್ರತಿಭಟನೆ ಬಿಸಿ
ಅತ್ತ ಸದನದ ಒಳಗೆ ಪ್ರತಿಭಟನೆ ನಡೆಸಲು ವಿಪಕ್ಷಗಳಾದ ಜೆಡಿಎಸ್ ಮತ್ತು ಬಿಜೆಪಿ ಸಿದ್ಧತೆ ನಡೆಸಿದೆ. ಡಿವೈಎಸ್ ಪಿ ಗಣಪತಿ ಪ್ರಕರಣದಲ್ಲಿ ಸಿಬಿಐ ಎಫ್ ಐಆರ್ ದಾಖಲಿಸಿದ ಸಚಿವ ಕೆಜೆ ಜಾರ್ಜ್ ರಾಜೀನಾಮೆಗೆ ಬಿಜೆಪಿ ಪ್ರತಿಭಟನೆ ನಡೆಸುವ ಸಾಧ್ಯತೆಯಿದೆ. ಅತ್ತ ಜೆಡಿಎಸ್ ವಿದ್ಯುತ್ ಹಗರಣವನ್ನು ಬಯಲಿಗೆಳೆಯಲು ಲೆಕ್ಕಾಚಾರ ಹಾಕಿದೆ. ಹೀಗಾಗಿ ವಿಶೇಷ ಸದನ ಪ್ರತಿಭಟನೆಯ ಬಿಸಿಯಲ್ಲೇ ಕರಗಿ ಹೋಗದಿದ್ದರೆ ಸಾಕು ಎಂದು ಜನತೆ ಪ್ರಾರ್ಥಿಸುವಂತಾಗಿದೆ.