ರಾಜ್ಯ ಪೊಲೀಸರಿಗೆ ವಾಟಾಳ್ ನಾಗರಾಜ್ ಬಲ

ಶುಕ್ರವಾರ, 27 ಮೇ 2016 (16:31 IST)
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಜೂನ್ 4 ರಂದು ರಾಜ್ಯದ್ಯಂತ ಪೊಲೀಸರು ಕೈಗೊಂಡಿರುವ ಸಾಮೂಹಿಕ ಪ್ರತಿಭಟನೆಗೆ ವಾಟಾಳ್ ನಾಗರಾಜ್ ಬೆಂಬಲ ವ್ಯಕ್ತಪಡಿಸಿದ್ದಾರೆ.
 
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್, ರಾಜ್ಯ ಸರಕಾರ ಪೊಲೀಸರಿಗೆ ನೀಡುವ ವೇತನದಲ್ಲಿ ತಾರತಮ್ಯ ಮಾಡುತ್ತಿದೆ. ರಾಜ್ಯ ಪೊಲೀಸರು ರಸ್ತೆಗಿಳಿದು ಸಾಮೂಹಿಕ ಪ್ರತಿಭಟನೆ ಮಾಡುವ ಸ್ಥಿತಿ ತಲುಪಿದ್ದಾರೆ ಎಂದು ಹೇಳಿದರು.
 
ಈ ಕುರಿತು ನಾನೇ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡುತ್ತಿನೆ. ಪೊಲೀಸರು ಎದುರಿಸುತ್ತಿರುವ ಸಮಸ್ಯೆಯ ಕುರಿತು ಚರ್ಚೆ ನಡಿಸುತ್ತೇನೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ