ಹೊಸ ಖದರ್‌ನಲ್ಲಿ ಡ್ಯೂಟಿಗಿಳಿಯಲಿದ್ದಾರೆ ರಾಜ್ಯ ಪೊಲೀಸರು

Sampriya

ಮಂಗಳವಾರ, 28 ಅಕ್ಟೋಬರ್ 2025 (15:37 IST)
Photo Credit X
ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯ ಸಿಬ್ಬಂದಿ ಇನ್ಮುಂದೆ ಹೊಸ ಟೋಪಿಗಳಲ್ಲಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.  ‘‘

ಪೊಲೀಸ್ ಕಾನ್‌ಸ್ಟೇಬಲ್ ಹಾಗೂ ಹೆಡ್ ಕಾನ್ಸ್‌ಟೇಬಲ್‌ಗಳಿಗೆ ಇಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಗೃಹಮಂತ್ರಿ ಡಾ.ಜಿ.ಪರಮೇಶ್ವರ್ ಅವರು ನೀಲಿ ವರ್ಣದ ಕ್ಯಾಪ್‌ಗಳನ್ನು ವಿತರಿಸಿದರು. 

ಕಳೆದ ಜೂನ್ ನಲ್ಲಿ ನಡೆದಿದ್ದ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶದಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಮತ್ತು ಹೆಡ್ ಕಾನ್ಸ್ಟೇಬಲ್‌ಗಳಿಗೆ ಹೊಸ ಕ್ಯಾಪ್ ವಿತರಿಸುವ ಬಗ್ಗೆ ನಿರ್ಧರ ಮಾಡಲಾಗಿತ್ತು. 

ತೆಲಂಗಾಣ ಪೋಲೀಸರು ಧರಿಸುತ್ತಿರುವ ತೆಳುವಾದ ನೀಲಿ ಬಣ್ಣದ ಪಿಕ್ಯಾಪ್ ನೀಡಲು ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದ್ದು ಅದರಂತೆ ಇಂದಿನಿಂದ ಪೊಲೀಸ್ ಕಾನ್ಸ್ಟೇಬಲ್ ಮತ್ತು ನೀಡಲಾಗಿದೆ

ರಾಜ್ಯದಲ್ಲಿ ಪೊಲೀಸ್ ಸಿಬ್ಬಂದಿಗೆ ಸ್ಲೋಚ್ ಹ್ಯಾಟ್ ಬದಲಿಗೆ ‘ಪೀಕ್ ಕ್ಯಾಪ್’ ಬಂದಿದೆ, ಹಿಂದೆ ರಾಜ್ಯದ ಕಾನ್‌ಸ್ಟೇಬಲ್ ಹಾಗೂ ಹೆಡ್ ಕಾನ್‌ಸ್ಟೇಬಲ್‌ಗಳು ಧರಿಸುತ್ತಿದ್ದ ಸ್ಲೋಚ್ ಹ್ಯಾಟ್ ಕ್ಯಾಪ್‌ನಲ್ಲಿ ಬದಲಾವಣೆ ತರಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ