ಕುರಿಗಾಹಿಗಳ ಪ್ರಜ್ಞೆ ತಪ್ಪಿಸಿ ಕುರಿಗಳ ಕಳ್ಳತನ

ಶನಿವಾರ, 16 ಡಿಸೆಂಬರ್ 2023 (18:01 IST)
ಕೊಪ್ಪಳದಲ್ಲಿ ಕುರಿ ಕಳ್ಳರ ಹಾವಳಿ ಹೆಚ್ಚಾಗಿದ್ದು, ರಾತ್ರಿ ವೇಳೆ ಕುರಿಗಾಹಿಗಳು ಹಾಗೂ ನಾಯಿಗಳಿಗೆ ಕೆಮಿಕಲ್ ಸ್ಪ್ರೇ ಹಾಕಿ ಪ್ರಜ್ಞೆ ತಪ್ಪಿಸಿ ಕುರಿಗಳನ್ನು ಕಳ್ಳತನ ಮಾಡಿ ಗೂಡ್ಸ್ ವಾಹನದಲ್ಲಿ ಒಯ್ಯುತ್ತಿದ್ದಾರೆ.

ಎರಡು ದಿನದ ಹಿಂದೆ ಚೌಡಪ್ಪ ಬನ್ನಿ ಎಂಬವರು ಸಾಕುತ್ತಿದ್ದ 25 ಕ್ಕೂ ಹೆಚ್ಚು ಕುರಿಗಳನ್ನು ಕಳ್ಳತನ ಮಾಡಲಾಗಿದೆ. ಈ ಬಗ್ಗೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕಳ್ಳರನ್ನು ಪತ್ತೆ ಮಾಡುವಂತೆ ಆಗ್ರಹಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ