ಕಬ್ಬನ್ ಪಾರ್ಕ್‌ನಲ್ಲಿ ಖಾಸಗಿ ಕಟ್ಟಡಗಳ ನಿರ್ಮಾಣಕ್ಕೆ ತೀವ್ರ ವಿರೋಧ

ಗುರುವಾರ, 13 ಏಪ್ರಿಲ್ 2023 (14:30 IST)
ಕಬ್ಬನ್ ಪಾರ್ಕ್‌ನಲ್ಲಿ ಅಕ್ರಮ ಕಟ್ಟಡ ನಿರ್ಮಾಣದ ಆರೋಪ ಕೇಳಿಬರುತ್ತಿದೆ, ನವಿಕರಣ ಹೆಸರಲ್ಲಿ ಉದ್ಯಾನದ ಸೌಂದರ್ಯಕ್ಕೆ ಧಕ್ಕೆ ತರಲಾಗುತ್ತಿದೆ ಎಂದು  ಪರಿಸರ ಪ್ರೇಮಿಗಳು ತೋಟಗಾರಿಕೆ ಇಲಾಖೆಯ ಮೇಲೆ ಆಕ್ರೋಶ ಹೊರಹಾಕಿದ್ದಾರೆ.ಕಬ್ಬನ್ ಪಾರ್ಕ್ ಬೆಂಗಳೂರಿನ ಪ್ರವಾಸಿತಾಣ ಹಾಗೂ ವಾಯು ವಿಹಾರಿಗಳ ಹಾಟ್‌ಸ್ಪಾಟ್. ಕಬ್ಬನ್ ಉದ್ಯಾನದ ವ್ಯಾಪ್ತಿಯಲ್ಲೇ ಇರುವ ಖಾಸಗಿ ಸೆಂಚುರಿ ಕ್ಲಬ್, ಇದೀಗಾ ನೀರಿನ ಸಂಸ್ಕರಣಾ ಘಟಕ ಮತ್ತು ಶೇಖರಣಾ ಟ್ಯಾಂಕ್ ನಿರ್ಮಿಸಲು ಮುಂದಾಗಿದೆ. ತೋಟಗಾರಿಕೆ ಇಲಾಖೆಯ ಯಾವ್ದೇ ಅನುಮತಿ ಪಡೆಯದೇ ಈ ಕಾಮಗಾರಿ ನಡೆಸ್ತಿದ್ದು, ಕಟ್ಟಡಗಳ ನಿರ್ಮಾಣದಿಂದ ಪರಿಸರಕ್ಕೆ ಧಕ್ಕೆಯಾಗ್ತಿದೆ ಅಂತ ಪರಿಸರ ಪ್ರೇಮಿಗಳು ತಿರುಗಿ ಬಿದ್ದಿದ್ದಾರೆ.

ಸ್ಮಾರ್ಟ್‌ಸಿಟಿ ಯೋಜನೆಯಡಿ ಕಬ್ಬನ್ ಉದ್ಯನವನವನ್ನ ಸಾಕಷ್ಟು ಅಭಿವೃದ್ಧಿಪಡಿಸಲಾಗಿದೆ. ಇಗಾಗಲೇ ಅಕ್ವೇರಿಯಂ ಕಟ್ಟಡ, ಎನ್‌ಜಿಓ ಕ್ಲಬ್, ಭಾಲಭವನ, ಟೆನ್ನಿಸ್ ಕ್ಲಬ್, ಸೆಂಚುರಿ ಕ್ಲಬ್ ಸೇರಿದಂತೆ ಬಹುತೇಕ ಎಲ್ಲಾ ಕಟ್ಟಡಗಳನ್ನ ನವಿಕರಿಸಲಾಗ್ತಿದೆ. ಕಬ್ಬನ್ ಪಾರ್ಕ್‌ನಲ್ಲಿ ನಿರ್ಮಾಣ ಹಂತದ ಕಟ್ಟಡ ಕಾಮಗಾರಿಗಳ ಬಗ್ಗೆ, ಇದು ಅಕ್ರಮ ಅಂತ ನಡಿಗೆದಾರರ ಸಂಘ ಕೋರ್ಟ್ ಮೆಟ್ಟಿಲೇರಿದೆ. ಇನ್ನೂ ಅಕ್ರಮವಾಗಿ ಅನುಮತಿ ಇಲ್ಲದೇ ಕಾಮಗಾರಿಯನ್ನ ಆರಂಭಿಸಿರುವ ಬಗ್ಗೆ ತೋಟಗಾರಿಕಾ ಇಲಾಖೆ, ಸೆಂಚ್ಯೂರಿ ಕ್ಲಬ್‌ಗೆ ನೋಟಿಸ್ ನೀಡಿದೆ ಎನ್ನಲಾಗ್ತಿದೆ.


ಅಭಿವೃದ್ಧಿ ಹೆಸ್ರಲ್ಲಿ,  ಉದ್ಯಾನದಲ್ಲಿ ಇತ್ತೀಚೆಗೆ ಕಟ್ಟಡಗಳನ್ನ ನಿರ್ಮಿಸಲಾಗುತ್ತಿದ್ದು  ಪಾರ್ಕ್ ಸೌಂದರ್ಯಕ್ಕೆ ಧಕ್ಕೆ ಬರುತ್ತಿರುವುದು ಪರಿಸರ ಪ್ರೇಮಿಗಳ ಮನಸಿಗೆ ನೋವು ಉಂಟು ಮಾಡಿರುವುದಂತು ನಿಜ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ