ವಿದ್ಯಾರ್ಥಿಯನ್ನ ಬಲಿ ಪಡೆದ ಸೆಲ್ಫಿ ಹುಚ್ಚು..?!

ಸೋಮವಾರ, 25 ಸೆಪ್ಟಂಬರ್ 2017 (13:53 IST)
ಎನ್`ಸಿಸಿ ಕ್ಯಾಂಪ್`ಗೆ ತೆರಳಿದ್ದ ವಿದ್ಯಾರ್ಥಿ ನೀರು ಪಾಲಾದ ಘಟನೆ ಬೆಂಗಳೂರು ಹೊರವಲಯದ ಕನಕಪುರ ಬಳಿಯ ರಾಮಗೊಂಡ್ಲುವಿನಲ್ಲಿ ನಡೆದಿದೆ. ವಿದ್ಯಾರ್ಥಿ ಮುಳುಗುತ್ತಿದ್ದರೂ ವಿದ್ಯಾರ್ಥಿಗಳು ಸೆಲ್ಫಿ ತೆಗೆದುಕೊಳ್ಳುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಜಯನಗರದ ನ್ಯಾಶನಲ್ ಕಾಲೇಜಿನ ವಿದ್ಯಾರ್ಥಿ ವಿಶ್ವಾಸ್ ಮೃತ ದುರ್ದೈವಿ. ನಿನ್ನೆ ರಾಮಗೊಂಡ್ಲು ಬೆಟ್ಟಕ್ಕೆ ಎನ್`ಸಿಸಿ ಶಿಕ್ಷಕರ ಜೊತೆ ಇಪ್ಪತ್ತು ವಿದ್ಯಾರ್ಥಿಗಳು ರಾಮಗೊಂಡ್ಲು ಬೆಟ್ಟಕ್ಕೆ ತೆರಳಿದ್ದರು. ಟ್ರಕ್ಕಿಂಗ್ ಬಳಿಕ ಕಲ್ಯಾಣಿಯಲ್ಲಿ ವಿದ್ಯಾರ್ಥಿಗಳು ಈಜಲು ತೆರಳಿದ್ದಾರೆ. ಈ ಸಂದರ್ಭ ವಿದ್ಯಾರ್ಥಿ ವಿಶ್ವಾಸ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ವಿದ್ಯಾರ್ಥಿ ಮುಳುಗುತ್ತಿದ್ದರೂ ಸಹಪಾಠಿಗಳು ಸೆಲ್ಫಿ ತೆಗೆಯುವುದರಲ್ಲಿ ನಿರತರಾಗಿದ್ದಾರೆ. ಸೆಲ್ಫೀ ಫೋಟೋದಲ್ಲೇ ವಿಶ್ವಾಸ್ ಮುಳುಗುತ್ತಿರುವ ದೃಶ್ಯ ಸೆರೆಯಾಗಿದೆ.

ಘಟನೆಗೆ ಕಾಲೇಜು ಆಡಳೀತ ಮಂಡಳಿಯೇ ಹೊಣೆ ಎಮದು ಆರೋಪಿಸಿರುವ ವಿದ್ಯಾರ್ಥಿಯ ಸಂಬಂಧಿಕರು ಕಾಲೇಜಿನ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ