ಎಲ್ಲರೆದುರೇ ವಿದ್ಯಾರ್ಥಿನಿಗೆ ಕಿಸ್ ಮಾಡಿದ ಸಹಪಾಠಿ

ಗುರುವಾರ, 21 ಜುಲೈ 2022 (09:40 IST)
ಮಂಗಳೂರು: ಕಾಲೇಜಿನಲ್ಲಿ ವಿದ್ಯಾರ್ಥಿಗಳ ನಡುವೆ ಚಾಲೆಂಜ್ ನಡೆದಿದ್ದು, ಸಹಪಾಠಿಯೊಬ್ಬ ಎಲ್ಲರೆದುರೇ ವಿದ್ಯಾರ್ಥಿನಿಗೆ ಚುಂಬಿಸಿದ ಘಟನೆ ನಡೆದಿದೆ.

ಮಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ಈ ಘಟನೆ ನಡೆದಿದೆ. ವಿದ್ಯಾರ್ಥಿಗಳ ನಡುವೆ ಟ್ರೂಥ್ ಆಂಡ್ ಡೇರ್ ಚಾಲೆಂಜ್ ನಡೆದಿದೆ. ಈ ವೇಳೆ ಚುಂಬಿಸಲು ಚಾಲೆಂಜ್ ಮಾಡಲಾಗಿದೆ.

ಈ ವೇಳೆ ವಿದ್ಯಾರ್ಥಿ ಹಿಂದು ಮುಂದು ನೋಡದೇ ಸಹಪಾಠಿಗೆ ಚುಂಬಿಸಿದ್ದು, ಇತರರು ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಈ ಘಟನೆಯಿಂದ ಎಚ್ಚೆತ್ತುಕೊಂಡ ಪೊಲೀಸರು ಪ್ರಕರಣದ ತನಿಖೆಗೆ ಮುಂದಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ