ಪೋಷಕರಿಂದ ಡೆತ್ ನೋಟ್ ಬರೆಸಿಕೊಳ್ಳುತ್ತಿರುವ ವಾರ್ಡನ್ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ

ಬುಧವಾರ, 17 ಅಕ್ಟೋಬರ್ 2018 (13:25 IST)
ಹಾಸ್ಟೇಲ್ ನಲ್ಲಿ ಯಾವುದೇ ಮೂಲಭೂತ ‌ಸೌಕರ್ಯಗಳಿಲ್ಲ. ಏನನ್ನಾದರೂ ವಿದ್ಯಾರ್ಥಿಗಳು ಕೇಳಲು ಹೊದರೆ ಹೊರಗಿನ ಗುಂಡಾಗಳಿಂದ ಹಲ್ಲೆ ಮಾಡಿಸುತ್ತಾರೆ ಹಾಗೂ‌ ವಿದ್ಯಾರ್ಥಿಗಳ ಪೋಷಕರಿಂದ ಡೆತ್ ನೋಟ್ ಬರೆಸಿಕೊಂಡಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಸಮಾಜ ಕಲ್ಯಾಣ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ವಿಜಯಪುರ ನಗರ ಮೆಟ್ರಿಕ್ ನಂತರದ ಹಾಸ್ಟೇಲ್ ವಿದ್ಯಾರ್ಥಿಗಳು ಏಕಾ ಏಕಿ ಸಮಾಜ ಕಲ್ಯಾಣ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ‌ಹಾಸ್ಟೇಲ್ ವಾರ್ಡನ್ ಕೂಲಪ್ಪ ಕೋರೆ ಎಂಬಾತ ಹಾಸ್ಟೇಲ್ ವಿದ್ಯಾರ್ಥಿಗಳ ಮೇಲೆ ಗುಂಡಾಗಳನ್ನು ಕರೆಸಿ ಹಲ್ಲೆ ಮಾಡಿಸುತ್ತಾರೆ. ಹಾಸ್ಟೇಲ್ ಮೂಲಭೂತ ಸೌಕರ್ಯಗಳ ಕುರಿತು ಪ್ರಶ್ನಿಸಿದರೆ ಪೊಲಿಸರಿಂದ ಬೆದರಿಕೆ ಹಾಕಿಸುತ್ತಾರೆ. ಅಷ್ಟೇ ಅಲ್ಲದೇ ಹಾಸ್ಟೇಲ್ ನ ವಿದ್ಯಾರ್ಥಿಗಳ ಪೋಷಕರಿಂದ ಡೆತ್ ನೋಟ್ ಬರೆಸಿಕೊಂಡಿದ್ದಾರೆ.

ಹಾಸ್ಟೇಲ್ ನಲ್ಲಿ ವಿದ್ಯಾರ್ಥಿಗಳು ಮೃತ ಪಟ್ಟರೆ ಅದಕ್ಕೆ ವಾರ್ಡನ್ ಆಗಲಿ ಅಥವಾ ಸರ್ಕಾರಿ ಅಧಿಕಾರಿಗಳಾಗಲಿ ಜವಾಬ್ದಾರರಲ್ಲ ಎಂದು ವಿದ್ಯಾರ್ಥಿಗಳ ಪೋಷಕರಿಂದ ಬಾಂಡ್ ಮಾಡಿಸಿಕೊಳ್ಳುತ್ತಿದ್ದಾರೆ. ಇಂತಹ ಹಾಸ್ಟೇಲ್ ವಾರ್ಡನ್ ನನ್ನು ಇಂದೇ ಅಮಾನತ್ತುಗೊಳಿಸಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಇನ್ನು ಈ ಕುರಿತು ವಾರ್ಡನ್ ಕೂಲಪ್ಪ ಕೊರೆಯನ್ನು ಕೇಳಿದರೆ ನಾನು ಡೆತ್ ನೋಟ್ ಕುರಿತು ಬರೆದು ಕೊಡಲು ‌ಹೇಳಿಲ್ಲ‌‌. ಆದರೆ ವಿದ್ಯಾರ್ಥಿಗಳ ಪುಂಡಾಟಿಕೆ ಕುರಿತು ಗಮನಕ್ಕೆ ಬಂದರೆ ಅವರನ್ನು ಹಾಸ್ಟೇಲ್ ನಿಂದ ಕಿತ್ತು ಹಾಕುತ್ತೇನೆ. ಇದಕ್ಕೆ ಪೋಷಕರ ಒಪ್ಪಿಗೆ ಕೂಡಾ ಇದೆ ಎಂದು ಬರೆದು ಕೊಡಲು ತಿಳಿಸಿದ್ದೆ. ಇನ್ನು ಹಾಸ್ಟೇಲ್ ನಲ್ಲಿ 10 ವಿದ್ಯಾರ್ಥಿಗಳು ಅನಧಿಕೃತವಾಗಿ ಇದ್ದರು. ಅಂತವರನ್ನು ಕಿತ್ತು ಹಾಕಿದ್ದೇನೆ. ಈ ಹಿನ್ನಲೆಯಲ್ಲಿ ಕೆಲ ವಿದ್ಯಾರ್ಥಿಗಳು ಈ ರೀತಿಯ ಆರೋಪ ಮಾಡುತ್ತಿದ್ದಾರೆ. ಈ ವಿದ್ಯಾರ್ಥಿಗಳ  ಪ್ರತಿಭಟನೆ ಹಿಂದೆ ಕೆಲವು ಕಾಣದ ಕೈಗಳ ಕೈವಾಡವಿದೆ ನನಗೆ ಹಲವು ಬೇಡಿಕೆಗಳನ್ನು ಅವರು ಇಟ್ಟಿದ್ದರು. ಅದಕ್ಕೆ ನಾನು ಬಗ್ಗದಾದಾಗ ಈ ರೀತಿಯ ಆರೋಪ ಹೊರಿಸುತ್ತಿದ್ದಾರೆ ಎಂದು ವಾರ್ಡನ್ ಹೇಳಿದ್ದಾರೆ.



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ