ವೈ. ಮೈಲಾಪುರದಲ್ಲಿದ್ದ ಒಂದು ಹಳೆಯ ಬಾವಿ ಕಳೆದ 10 ವರ್ಷಗಳಿಂದ ಬತ್ತಿ ಹೋಗಿತ್ತು. ಆದರೆ ನಿನ್ನೆ ಇದ್ದಕ್ಕಿದ್ದಂತೆ ಬಾವಿಯಲ್ಲಿ ನೀರು ತುಂಬಿ ಬಿಟ್ಟಿದೆ. ಗ್ರಾಮದಲ್ಲಿ ಎಲ್ಲಾ ನೀರಿನ ಮೂಲಗಳು ಬತ್ತಿರುವಾಗ ಹಲ ವರ್ಷಗಳಿಂದ ಒಣಗಿ ಬಿದ್ದಿದ್ದ ಬಾವಿಯಲ್ಲಿ ನಾಲ್ಕು ಅಡಿ ನೀರು ಹೇಗೆ ಬಂತು, ಎಲ್ಲಿಂದ ಬಂತು ಎಂಬ ಕುತೂಹಲ ಸ್ಥಳೀಯರನ್ನು ಕಾಡುತ್ತಿದೆ. ಇದು ಸಿಹಿ ನೀರಾಗಿದ್ದು ಕುಡಿಯಲು ಯೋಗ್ಯವಾಗಿದೆ.