ಕೋಟಿಗೊಬ್ಬ 3' ಟ್ರೇಲರ್ ನೋಡಿದ ಅಭಿಮಾನಿಗಳಿಗೆ ಸುದೀಪ್ ಅವರ ಹಲವು ಗೆಟಪ್ಗಳು ಕಾಣಿಸಿದ್ದವು. ಆದರೆ ಈವರೆಗೂ ಚಿತ್ರತಂಡ ಬಿಡುಗಡೆ ಮಾಡದೇ ಇರುವ ಒಂದು ಹೊಸ ಪೋಸ್ಟರ್ ಅನ್ನು ಈಗ ಸುದೀಪ್ ಹಂಚಿಕೊಂಡಿದ್ದಾರೆ. ಇದರಲ್ಲಿ ಬಿಳಿ ಕೂದಲು, ಉದ್ದ ಗಡ್ಡ ಬಿಟ್ಟುಕೊಂಡು ವೃದ್ಧನ ಗೆಟಪ್ನಲ್ಲಿ ಕಿಚ್ಚ ಕಾಣಿಸಿಕೊಂಡಿದ್ದಾರೆ. ಅದನ್ನು ನೋಡಿದ ಫ್ಯಾನ್ಸ್ಗೆ 'ಕೋಟಿಗೊಬ್ಬ 3' ಬಗ್ಗೆ ಇದ್ದ ಕ್ರೇಜ್ ಇನ್ನಷ್ಟು ಹೆಚ್ಚಾಗಿದೆ.