ಅಮಿತ್ ಶಾ ಸ್ವಾಗತ ಫ್ಲೆಕ್ಸ್‌ನಲ್ಲಿ ಸುಮಲತಾ
BJP ಫ್ಲೆಕ್ಸ್‌ನಲ್ಲಿ ಮಂಡ್ಯ ಸಂಸದೆ ಸುಮಲತಾ ರಾರಾಜಿಸಿದ್ದಾರೆ. ಅಮಿತ್ ಶಾಗೆ ಸ್ವಾಗತ ಕೋರಿರುವ ಫ್ಲೆಕ್ಸ್‌ನಲ್ಲಿ ಸುಮಲತಾ ಫೋಟೋ ಹಾಕಲಾಗಿದೆ. ನಾಳೆ ಮಂಡ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಬರ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಸ್ವಾಗತಕ್ಕೆ ಫ್ಲೆಕ್ಸ್ ಹಾಕಲಾಗಿದೆ. BJP ಬೃಹತ್ ಸಮಾವೇಶದ ಫ್ಲೆಕ್ಸ್‌ನಲ್ಲಿ ಸುಮಲತಾ ಭಾವಚಿತ್ರ ರಾರಾಜಿಸಿದೆ. ಸಂಸದೆ ಆಪ್ತ ಸಚ್ಚಿದಾನಂದ ಸ್ವಾಗತ ಕೋರಿರುವ ಫ್ಲೆಕ್ಸ್‌ನಲ್ಲಿ ಸುಮಲತಾರ ಫೋಟೋ ಹಾಕಲಾಗಿದೆ. ಇಂಡವಾಳು ಸಚ್ಚಿದಾನಂದ ಈಗಾಗಲೇ BJP ಸೇರಿದ್ದಾರೆ. ಸಂಸದೆ ಸುಮಲತಾ ಅವರು ಅಮಿತ್ ಶಾ ಜೊತೆ ವೇದಿಕೆ ಹಂಚಿಕೊಳ್ತಾರಾ ಎಂಬ ಪ್ರಶ್ನೆ ಮೂಡಿದೆ.