ಕುತೂಹಲ ಮೂಡಿಸಿದ ಸುಮಲತಾ ನಡೆ
ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಬಿಜೆಪಿ ಕೈ ಹಿಡಿಯುತ್ತಾರಾ ಎಂಬ ಅನುಮಾನ ಮೂಡಿದೆ. ನಿನ್ನೆ ಮಂಡ್ಯದಲ್ಲಿ ಕಮಲಪಾಳೆಯದ ಜೊತೆಗೆ ವೇದಿಕೆ ಹಂಚಿಕೊಂಡಿದ್ದರು. ಇದೀಗ ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರನ್ನು ಸಂಸದೆ ಸುಮಲತ ಭೇಟಿ ಮಾಡಿದ್ದಾರೆ.ಇನ್ನು ಸುಮಲತಾ ಈ ಕುರಿತು ಮಾತನಾಡಿ, ಇವತ್ತು ಮಂಡ್ಯದಿಂದ ಹಲವರು ಬಂದಿದ್ದಾರೆ.. ಇವತ್ತು ಎಲ್ಲರ ಜತೆ ಚರ್ಚೆ ಮಾಡ್ತೇನೆ.ನಾನು ಯಾವುದೇ ತೀರ್ಮಾನ ಇನ್ನೂ ಮಾಡಿಲ್ಲ. ಇನ್ನೂ ಹಲವರ ಜತೆ, ವರಿಷ್ಠರ ಜತೆ ಚರ್ಚೆ ಮಾಡಬೇಕು. ನನ್ನ ಲಾಭ ನಷ್ಟ ನೋಡಿ ನಿರ್ಧಾರ ಮಾಡಲ್ಲ.. ನನ್ನ ಜತೆ ಇರುವವರ ಬಗ್ಗೆಯೂ ನೋಡಿಕೊಂಡೇ ನಿರ್ಧಾರ ಮಾಡಬೇಕಿದೆ ಎಂದು ಹೇಳಿದ್ರು..