ಮಕರ ಸಂಕ್ರಮಣದಲ್ಲಿ ಸೂರ್ಯ ದಕ್ಷಿಣಾಯನದಿಂದ ಉತ್ತರಾಯನಕ್ಕೆ ಪಥ ಬದಲಿಸ್ತಾನೆ. ಈ ಹಿನ್ನಲೆಯಲ್ಲಿ ಪುರಾಣ ಪ್ರಸಿದ್ಧ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಸೂರ್ಯನ ರಶ್ಮಿ ಶಿವಲಿಂಗದ ಮೇಲೆ ಸ್ಪರ್ಶವಾಯಿತು.
ಮಂಡ್ಯದ ಚಂದ್ರವನ ಆಶ್ರಮದ ಪುರಾಣ ಪ್ರಸಿದ್ಧ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಸೂರ್ಯನ ರಶ್ಮಿ ಶಿವಲಿಂಗದ ಮೇಲೆ ಸ್ಪರ್ಶವಾಯಿತು.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ದಕ್ಷಿಣ ಕಾವೇರಿ ನದಿ ತೀರದಲ್ಲಿರುವ ಏಕೈಕ ಶಿವನ ದೇವಾಲಯವಾಗಿರುವ ಪುರಾಣ ಪ್ರಸಿದ್ಧ ಕಾಶಿ ಚಂದ್ರಮೌಳೇಶ್ವರ ದೇವಾಲಯದ ಗರ್ಭಗುಡಿಯ ಲಿಂಗದ ಮೇಲೆ ಸೂರ್ಯನ ಪ್ರಥಮ ರಶ್ಮಿ ಕಿರಣಗಳು ಸ್ಪರ್ಶ ಮಾಡಿದವು. ಈ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ವಿವಿಧೆಡೆಯಿಂದ ಆಗಮಿಸಿದ ಭಕ್ತರು, ಮುಂಜಾನೆಯಿಂದ ಕಾದು ಕುಳಿತು ಸೂರ್ಯ ರಶ್ಮಿಯ ಕಿರಣಗಳು ಲಿಂಗದ ಮೇಲೆ ಬೀಳುವ ದೃಶ್ಯವನ್ನು ಕಣ್ತುಂಬಿಕೊಂಡು ಪುನೀತರಾದರು.
ಇನ್ನು ಇಂದು ಮುಂಜಾನೆ ಮೂರು ಗಂಟೆಯಿಂದ ವಿವಿಧ ಅಭಿಷೇಕ, ಪೂಜಾ ಕೈಂಕರ್ಯಗಳು ಚಂದ್ರವನ ಆಶ್ರಮದ ಪೀಠಾಧ್ಯಕ್ಷರಾದ ತ್ರಿನೇತ್ರ ಮಹಂತ ಸ್ವಾಮೀಜಿ ನೇತೃತ್ವದಲ್ಲಿ ನೆರವೇರಿದವು. ಬಳಿಕ ಗೋ ಪೂಜೆ ಮಾಡಿದ ಶ್ರೀಗಳು ಭಕ್ತರಿಗೆ ಉಪದೇಶ ನೀಡಿ, ಸಂಕ್ರಾಂತಿ ಶುಭಾಶಯ ಕೋರಿದರು.