ಮದುವೆ ಗಂಡಿನ ಸೂಪರ್​ ಡ್ಯಾನ್ಸ್​​

ಶನಿವಾರ, 5 ನವೆಂಬರ್ 2022 (17:06 IST)
ಇತ್ತೀಚಿನ ದಿನಗಳಲ್ಲಿ ಮದುವೆಗಳು ಬಹಳ ವಿಜೃಂಭಣೆಯಿಂದ ನಡೆಯುತ್ತವೆ. ವರ-ವಧು ತರಹೇವಾರಿಯಲ್ಲಿ ಮದುವೆಯನ್ನು ಆಚರಿಸಿಕೊಳುತ್ತಾರೆ. ಡ್ಯಾನ್ಸ್​​, ಫೋಟೋ ಶೂಟ್​, ನಾನಾ ತರಹವಾಗಿ ಸಂಭ್ರಮಾಚರಣೆ ಮಾಡಿಕೊಳ್ಳುತ್ತಾರೆ. ಇದೀಗ ಅದಕ್ಕೆ ಪೂರಕವಾಗಿರುವಂತೆ ವಿಡಿಯೋವೊಂದು ವೈರಲ್ ಆಗಿದೆ. ಹೌದು ಮದುವೆಯ ಗಂಡು ಸಂಭ್ರಮದಲ್ಲಿ ಕುಣಿದು ಕುಪ್ಪಳಿಸಿದ್ದಾನೆ. ಮದುವೆ ಮುಗಿಸಿಕೊಂಡು ಬಂದ ಜೋಡಿಗಳು ತಮ್ಮೂರಿಗೆ ಹೋಗುತ್ತಿರಬೇಕಾದರೆ, ವರ ವಧುವಿಗೆ ಮೊದಲು ಡ್ಯಾನ್ಸ್ ಮಾಡುವಂತೆ ಕೇಳಿದ್ದಾನೆ. ಇದಕ್ಕೆ ಅವಳು ಹಿಂಜರಿದಿದ್ದಾಳೆ. ಇನ್ನು ರೊಚ್ಚಿಗೆದ್ದ ಗಂಡು ಒಬ್ಬನೇ ಕುಣಿದಿದ್ದಾನೆ. ಅವನ ಮಸ್ತ್​ ಡ್ಯಾನ್ಸ್​ಗೆ ಎಲ್ಲರೂ ಫಿದಾ ಆಗಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ