ಕಾವೇರಿ ವಿವಾದ: ಮೊದಲಿನಿಂದಲೂ ತಮಿಳುನಾಡು ಪರವಾಗಿಯೇ ಸುಪ್ರೀಂ ತೀರ್ಪು ಎಂದ ವಾಟಾಳ್

ಬುಧವಾರ, 5 ಅಕ್ಟೋಬರ್ 2016 (18:27 IST)
ಕಾವೇರಿ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮೊದಲಿನಿಂದಲೂ ತಮಿಳುನಾಡು ಪರವಾಗಿಯೇ ತೀರ್ಪು ನೀಡುತ್ತಿದೆ. ನ್ಯಾಯ ಪೀಠ ಬದಲಿಸುವುದಕ್ಕಾದರೂ ರಾಜ್ಯ ಸರಕಾರ ಮನವಿ ಮಾಡಬಹುದಿತ್ತು. ಅವರು ಹೇಳಿದಂತೆ ನೀರು ಬಿಡುತ್ತಾ ಹೋದರೆ ಭವಿಷ್ಯದಲ್ಲಿ ನೀರಿನ ಅಗತ್ಯ ಹೇಗೆ ಪೂರೈಸುತ್ತಿರಿ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ರಾಜ್ಯ ಸರಕಾರಕ್ಕೆ ಸವಾಲು ಹಾಕಿದರು. 
 
ತಮಿಳುನಾಡಿಗೆ ನಾಡಿಗೆ ಕಾವೇರಿ ನೀರು ಹರಿಸಿರುವುದನ್ನು ಖಂಡಿಸಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಇಂದು ಖಾಲಿ ಬಿಂದಿಗೆಗಳ ನಡುವೆ ಕುಳಿತು ವಿನೂತನ ಪ್ರತಿಭಟನೆ ಕೈಗೊಂಡರು.
 
ಕೆಂಪೆಗೌಡ ಬಸ್ ನಿಲ್ದಾಣದ ಸಮೀಪ ತಮ್ಮ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿದ ವಾಟಾಳ್ ನಾಗರಾಜ್, ಯಾವುದೇ ಕಾರಣಕ್ಕೂ ರಾಜ್ಯ ಸರಕಾರ ತಮಿಳುನಾಡಿಗೆ ನೀರು ಹರಿಸಬಾರದಿತ್ತು. ರಾಜ್ಯದಲ್ಲಿ ಸಾಕಷ್ಟು ನೀರಿನ ಅಭಾವವಿದೆ. ಬೆಂಗಳೂರು ನೇರಿದಂತೆ ಹಳೆ ಮೈಸೂರು ಭಾಗದ ಜನರಿಗೆ ಕುಡಿಯುವ ನೀರು ನೀಡಲು ಜಲಾಶಯಗಳಲ್ಲಿ ಅಗತ್ಯ ಪ್ರಮಾಣದ ನೀರಿಲ್ಲ. ಈ ಸಂಬಂಧ ಮುಂದೆ ಬೀಳುವ ಮಳೆ ನೀರಿಕ್ಷೆ ಆಧಾರದ ಮೇಲೆ ನೀರು ಹರಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. 
 
ವಿಶೇಷ ಅಧಿವೇಶನದಲ್ಲಿ ಪ್ರತಿಪಕ್ಷ ನಾಯಕರು ಸಹ ಕಾವೇರಿಯಿಂದ ನೀರು ಹರಿಸಲು ಒಪ್ಪಬಾರದಿತ್ತು. ರಾಜ್ಯ ಸರಕಾರ ಜನತೆಯ ಹಿತದೃಷ್ಟಿಯಿಂದ ಯೋಚನೆ ಮಾಡಬೇಕಿತ್ತು ಎಂದು ನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಬೇಸರ ವ್ಯಕ್ತಪಡಿಸಿದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ