ಸುಪ್ರೀಂಕೋರ್ಟ್ ಕಾವೇರಿ ತೀರ್ಪು: ಕಲಿಯುಗದಲ್ಲಿ ಹಾದರವೇ ಮಂತ್ರಿ, ಕಳ್ಳಕಾಕರೇ ಸೇನಾಪತಿಗಳು ಎಂದ ಜಗ್ಗೇಶ್

ಮಂಗಳವಾರ, 20 ಸೆಪ್ಟಂಬರ್ 2016 (17:34 IST)
ಕಾವೇರಿ ನೀರು ಹಂಚಿಕೆ ಕುರಿತಂತೆ ಸುಪ್ರೀಂಕೋರ್ಟ್ ಆದೇಶದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಕಲಿಯುಗದಲ್ಲಿ ಹಾದರವೇ ಮಂತ್ರಿ ಕಳ್ಳಕಾಕರೇ ಸೇನಾಪತಿಗಳು ಎಂದು ನಟ ಜಗ್ಗೇಶ್ ಹೇಳಿದ್ದಾರೆ.
 
ನ್ಯಾಯ ಹಳ್ಳ ಕಡೆ, ಅನ್ಯಾಯ ಸಂಪತ್ತಿನ ಕಡೆ, ಕಲಿಯುಗದಲ್ಲಿ ಅನ್ಯಾಯವೇ ರಾಜ. ಸತ್ಯವಂತ ಸುಡುಗಾಡಿಗೆ, ಸುಳ್ಳುಗಾರ ಲೋಕಪೂಜಿತ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 
ಸಾಮಾಜಿಕ ಅಂತರ್ಜಾಲ ತಾಣವಾದ ಟ್ವಿಟ್ಟರ್‌ನಲ್ಲಿ ಸಂದೇಶ ಪೋಸ್ಟ್ ಮಾಡಿದ ಜಗ್ಗೇಶ್, ಕಲಿಯುಗದಲ್ಲಿ ಸತ್ಯವಂತರಿಗೆ ನ್ಯಾಯ ದೊರೆಯುವುದಿಲ್ಲ. ಸುಪ್ರೀಂಕೋರ್ಟ್ ತೀರ್ಪು ರಾಜ್ಯಕ್ಕೆ ಮರಣಶಾಸನವಾಗಿದೆ ಎಂದು ಗುಡುಗಿದ್ದಾರೆ.
 
ಕಾವೇರಿ ಜಲಾನಯನದಲ್ಲಿ ರಾಜ್ಯದ ರೈತರಿಗೆ ಕುಡಿಯುವ ನೀರಿಲ್ಲ. ಇಂತಹ ಸಂದರ್ಭಗಳಲ್ಲಿ ತಮಿಳುನಾಡಿಗೆ ಯಾವ ರೀತಿ ನೀರು ಬಿಡಲು ಸಾಧ್ಯ ಎಂದು ಪ್ರಶ್ನಿಸಿದ ಅವರು, ಯಾವುದೇ ಕಾರಣಕ್ಕೂ ಸುಪ್ರೀಂಕೋರ್ಟ್ ತೀರ್ಪು ಪಾಲಿಸಬಾರದು ಎಂದು ನವರಸ ನಾಯಕ ನಟ ಜಗ್ಗೇಶ್ ಕರೆ ನೀಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ