ಪ್ರಧಾನಿ ಮೋದಿ ವಿರುದ್ದ ಸುರ್ಜೆ ವಾಲಾ ವಾಗ್ದಾಳಿ

ಮಂಗಳವಾರ, 21 ಮಾರ್ಚ್ 2023 (21:02 IST)
ಕೇವಲ ಪ್ರಚಾರಕ್ಕಾಗಿ  ಮುಕ್ತಾಯವಾಗದ ಕಾಮಗಾರಿಗಳನ್ನು ಪ್ರಧಾನಿ ಮೋದಿ ಅವರು ಉದ್ಘಾಟಿಸುತ್ತಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆ ವಾಲಾ ಆರೋಪಿಸಿದ್ದಾರೆ.ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ಅವರು ಆರಂಭ ಹಾಗೂ ಅಂತ್ಯ ಸಿದ್ಧವಾಗದ ಮೆಟ್ರೋ ಮಾರ್ಗವನ್ನು ಉದ್ಘಾಟನೆ ಮಾಡುತ್ತಿದ್ದಾರೆ. ಈ ಮೂಲಕ ನಕಲಿ ಜನಪ್ರಿಯತೆಗೋಸ್ಕರ ಬೆಂಗಳೂರಿನ ಜನರ ಬದುಕನ್ನ ಪಣಕ್ಕಿಡುತ್ತಿದ್ದಾರೆ. ಅರ್ಧ ಮುಕ್ತಾಯಗೊಂಡಿರುವ ಕಾಮಗಾರಿಯನ್ನು ಉದ್ಘಾಟಿಸುವ ಅಗತ್ಯ ಏನಿದೆ? ಚುನಾವಣೆಯನ್ನು ಮುಂದಿಟ್ಟುಕೊಂಡು ಈ ಗಿಮಿಕ್  ಮಾಡುತ್ತಿದ್ದಾರೆ. ಇನ್ನೂ ಆರು ತಿಂಗಳು ನಿರ್ಮಾಣ ಅಗತ್ಯವಿರುವ ಮಾರ್ಗ ಉದ್ಘಾಟನೆ ಅಗತ್ಯವೇ? ಮಾರ್ಗ ಪೂರ್ಣ ಗೊಳ್ಳದ ಸ್ಥಳದಲ್ಲಿ ಬಿಎಂಟಿಸಿ ಬಸ್ ಸಂಪರ್ಕ ಕಲ್ಪಿಸುವುದು ಎಷ್ಟು ಸರಿ? 58 ಲೋಪಗಳನ್ನು ಮೆಟ್ರೋ ರೈಲು ಆಯುಕ್ತರು ತೋರಿಸಿದ ಬಳಿಕವೂ ಉದ್ಘಾಟನೆ ಅಗತ್ಯವೇ? ಬೆಂಗಳೂರು ಪ್ರಯಾಣಿಕರ ಬದುಕನ್ನು ಪಣಕ್ಕಿಟ್ಟು ಮಾರ್ಗ ಉದ್ಘಾಟನೆ ಅಗತ್ಯವೇ? ಎಂದು ಸರ್ಕಾರಕ್ಕೆ ಪ್ರಶ್ನೆ ಮಾಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ