ಶರಣಾಗತಿಗೆ ಸಮಯ ಕೊಡದ ಸುಪ್ರೀಂಕೋರ್ಟ್:‌ ನವಜ್ಯೋತ್‌ ಸಿಂಗ್‌ ಸಿಧುಗೆ ಮುಖಭಂಗ

ಶುಕ್ರವಾರ, 20 ಮೇ 2022 (14:19 IST)
ಅನಾರೋಗ್ಯದ ಕಾರಣ ಪೊಲೀಸರಿಗೆ ಶರಣಾಗಲು ಸಮಯವಕಾಶ ಕೊಡಿ ಎಂದು ಕಾಂಗ್ರೆಸ್‌ ಮುಖಂಡ ನವಜ್ಯೋತ್‌ ಸಿಂಗ್‌ ಸಿಧು ಮಾಡಿದ ಮನವಿಯನ್ನು ಸುಪ್ರೀಂಕೋರ್ಟ್‌ ತಿರಸ್ಕರಿಸಿದೆ.
೧೯೮೮ರಲ್ಲಿ ನಡೆದ ವೃದ್ಧನ ಮೇಲಿನ ಹಲ್ಲೆ ಪ್ರಕರಣದಲ್ಲಿ ನವಜ್ಯೋತ್‌ ಸಿಂಗ್‌ ಸೀಧು ದೋಷಿ ಎಂದು ತೀರ್ಪು ನೀಡಿದ್ದ ಸುಪ್ರೀಂಕೋರ್ಟ್‌ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿತ್ತು.
ಅನಾರೋಗ್ಯದ ಹಿನ್ನೆಲೆಯಲ್ಲಿ ಶರಣಾಗಲು ಸಮಯವಕಾಶ ಬೇಕು ಎಂಬ ಸಿಧು ಮನವಿಯನ್ನು ತಿರಸ್ಕರಿಸಿದ ನ್ಯಾಯಾಲಯ ನೀವು ಅನಾರೋಗ್ಯದ ಬಗ್ಗೆ ನಿರ್ದಿಷ್ಟವಾಗಿ ವಿವರ ನೀಡದ ಕಾರಣ ಸಮಯವಕಾಶ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ