ಪ್ರೀತಿಸಿ ಮದ್ವೆಯಾಗಿದ್ದ ಪತ್ನಿ ಅನುಮಾನಾಸ್ಪದ ಸಾವು?
ತೆಕ್ಕಲಕೋಟೆ ಠಾಣೆಯ ಪೇದೆ ರಮೇಶ್ ಪತ್ನಿ ರಾಜೇಶ್ವರಿ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾರೆ.
ಕಳೆದ ರಾತ್ರಿ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಆದರೆ ಕುಟುಂಬಸ್ಥರು, ಪತಿ ರಮೇಶ್ ಕೊಲೆ ಮಾಡಿರುವುದಾಗಿ ಆರೋಪಿಸಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆ ಯುವತಿ ಮನೆಯವರ ವಿರೋಧದ ನಡುವೆಯೂ ಇಬ್ಬರು ಪ್ರೀತಿಸಿ ಮದುವೆಯಾಗಿದ್ದರು. 6 ತಿಂಗಳ ಹಿಂದೆಯಷ್ಟೇ ದಂಪತಿಗೆ ಹೆಣ್ಣು ಮಗು ಜನಿಸಿತ್ತು.
ನಿನ್ನೆ ಬೆಳಗಿನ ಜಾವ ಸಾವನ್ನಪ್ಪಿರುವ ಪತ್ನಿ ರಾಜೇಶ್ವರಿ ಶವವನ್ನು ಇದ್ದಕ್ಕಿದ್ದ ಹಾಗೆ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿರುವ ತವರು ಮನೆಗೆ ತೆಗೆದುಕೊಂಡು ಹೋಗಿದ್ದಾನೆ.