ಮೌಢ್ಯ ನಿಷೇಧಕ್ಕೆ ನಿರಂತರ ಜಾಗೃತಿ ಅಗತ್ಯ: ಕಾಗೋಡು ತಿಮ್ಮಪ್ಪ

ಶುಕ್ರವಾರ, 15 ಸೆಪ್ಟಂಬರ್ 2017 (13:44 IST)
ನಮ್ಮ ಸಮಾಜದಲ್ಲಿ ಮೌಢ್ಯನಿಷೇಧಕ್ಕೆ ನಿರಂತರ ಜಾಗೃತಿ ಅಗತ್ಯ. ಕೇವಲ ಕಾನೂನಿನಿಂದ ಮೌಢ್ಯವನ್ನು ತಡೆಯಲಾಗದು. ಜನತೆಯಲ್ಲಿ ಅರಿವು ಮೂಡಿಸುವ ಕಾರ್ಯವಾಗಬೇಕು ಎಂದು ಕಂದಾಯ ಖಾತೆ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ವರ್ಗಗಳ ಜನತೆ ಮೌಢ್ಯ ಆಚರಣೆಗೆ ವಿರುದ್ಧವಾಗಿ ನಿಲ್ಲಬೇಕು. ಅಂದಾಗ ಮಾತ್ರ ಮೌಢ್ಯ ಆಚರಣೆಯನ್ನು ತಡೆಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
 
ಮೌಢ್ಯ ನಿಷೇಧ ಕಾನೂನು ಜಾರಿಗೆ ತಂದೇ ತರುತ್ತೇವೆ. ನಮ್ಮ ಸಮಾಜದಲ್ಲಿ ಮೌಢ್ಯವನ್ನು ತಡೆಯುವುದು ತುಂಬಾ ಕಷ್ಟ ಎಂದು ಬೇಸರ ವ್ಯಕ್ತಪಡಿಸಿದರು.
 
ರಾಜ್ಯದಲ್ಲಿ ಸರಾಸರಿ ಮಳೆಯಾಗಿದೆ. ಕೆಲವೆಡೆ ಮೋಡಬಿತ್ತನೆಯಿಂದ ಅನುಕೂಲವಾಗಿದೆ ಎಂದು ಕಂದಾಯ ಖಾತೆ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ