ರೈತರ ಪ್ರತಿಭಟನೆಗೆ ಸ್ವಾಮೀಜಿಗಳ ಸಾಥ್
ರೈತರು ನಡೆಸುತ್ತಿರುವ ಪ್ರತಿಭಟನೆಗೆ ಸ್ವಾಮೀಜಿಗಳು ಸಾಥ್ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ಮುರಗುಂಡಿ ಗ್ರಾಮದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಕೌಲಗುಡ್ಡ ಅಮರೇಶ್ವರ ಸ್ವಾಮೀಜಿ, ಅಪ್ಪಯ್ಯ ಸ್ವಾಮೀಜಿ ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ಸುವರ್ಣಸೌಧ ಮುಂದೆ ಪ್ರತಿಭಟನೆಯಲ್ಲಿ ಹತ್ತು ಜನ ರೈತರ ಮೆಲೆ ಪ್ರಕರಣ ದಾಖಲಾಗಿತ್ತು. ಅದರಲ್ಲಿ ಮೂವರು ರೈತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಜಯಶ್ರೀ ಗುರನ್ನವರ, ಚುನ್ನಪ್ಪಾ ಪೂಜೆರಿ, ರಾಘವೇಂದ್ರ ನಾಯಿಕ ಭಾಗಿಯಾಗಿದ್ದರು. ಅಥಣಿ ತಾಲೂಕಿನ ಮುರಗುಂಡಿ ಗ್ರಾಮದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ದಿನೆ ದಿನೇ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.