ಸ್ವಾಮೀಜಿಗಳು ಜಾತಿವಾದಿಗಳು ಎಂಬ ಭಾವನೆ ಸರಿಯಲ್ಲ: ಮುರುಘಾ ಶ್ರೀ
ಬೆಂಗಳೂರಿನಲ್ಲಿ ಸ್ವಾಮೀಜಿಗಳ ಮಠಾಧೀಶರ ಸಮಾವೇಶದಲ್ಲಿ ಭಾನುವಾರ ಮಾತನಾಡಿದ ಅವರು, 7 ವರ್ಷಗಳ ಹಿಂದೆ ಅಹಿಂದಾ ಎಂಬ ಚಳವಳಿ ನಡೆಯಿತು. ಜಾತಿ ಬೇಧವನ್ನು ಮರೆತು ನಾನು ಸಿದ್ದರಾಮಯ್ಯನವರಿಗೆ ಬೆಂಬಲ ನೀಡಿದ್ದೆ. ಮಠಾಧೀಶರಿಗೆ ಅಭಿಮಾನಕ್ಕಿಂತ ಜಾತ್ಯಾತೀತ ಅನ್ನೋದ ಮುಖ್ಯ. ನಮಗೆ ಆ ರೀತಿ ಮಾತನಾಡಲು ಹಕ್ಕುಗಳಿವೆ ಎಂದರು.
ಇದು ಒಂದು ದಿನದ ಸಮಾವೇಶಕ್ಕೆ ಅಲ್ಲ. ಮುಂಬರುವ ದಿನಗಳಲ್ಲಿ ಅತ್ಯಂತ ಬಲಿಷ್ಠ ಸಂಘಟನೆ ಮಾಡಬೇಕು. ಇದು ತುಂಬಾ ಅನಿವಾರ್ಯವಾಗಿದೆ. ಸಾಮಾಜಿಕವಾಗಿರುವ ಸಮಸ್ಯೆ ಇರಬಹುದು, ಧಾರ್ಮಿಕ ಸಮಸ್ಯೆ ಇರಬಹುದು, ರಾಜಕೀಯ ಸಮಸ್ಯೆ ಇರಬಹುದು ಎಲ್ಲದಕ್ಕೂ ಪರಿಹಾರ ಕಂಡುಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.