1998 ಮಾರ್ಚ್ 2 ರಿಂದ ಜೈಲಿನಲ್ಲಿದ್ದು, ಏಕಾಂತ ಸೆರೆವಾಸ ಅನುಭವಿಸಿದ್ದೇನೆ. ನನ್ನ ಕ್ಷಮಾಧಾನ ಅರ್ಜಿಯನ್ನು ರಾಷ್ಟ್ರಪತಿಯವರು 2 ವರ್ಷ ಮೂರು ತಿಂಗಳ ಕಾಲ ವಿಳಂಬ ಮಾಡಿದ್ದಾರೆ. ಇದರಿಂದ ನಾನು ಸಾಕಷ್ಟು ಖಿನ್ನತೆಗೊಳಗಾಗಿದ್ದೇನೆ. ಹೀಗಾಗಿ ನನಗೆ ನೀಡಿರುವ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿ ಎಂದು ಕೋರಿ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾನೆ.
ಮಹಿಳೆಯರ ಮೇಲೆ ಅತ್ಯಾಚಾರ ಮಾಡಿ ವಿಕೃತವಾಗಿ ಕೊಲೆ ಮಾಡುತ್ತಿದ್ದ ಉಮೇಶ್ ರೆಡ್ಡಿಗೆ ಫೆ.18, 2009 ರಲ್ಲಿ ಕರ್ನಾಟಕ ಹೈಕೋರ್ಟ್ ಗಲ್ಲು ಶಿಕ್ಷೆ ವಿಧಿಸಿತ್ತು. ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದಿರುವ ಸುಪ್ರೀಂಕೋರ್ಟ್, ರೆಡ್ಡಿಗೆ ಗಲ್ಲು ಶಿಕ್ಷೆ ಕಾಯಂ ಗೊಳಿಸಿದೆ.
1998 ರಲ್ಲಿ ಜಯಶ್ರೀ ಎಂಬ ಮಹಿಳೆಯ ಕೈ ಕಾಲು ಕಟ್ಟಿ ಅತ್ಯಾಚಾರ ಎಸಗಿದ್ದ ಉಮೇಶ್ ರೆಡ್ಡಿ, ಬಳಿಕ ಆಕೆಯನ್ನು ಕೊಂದು ಮನೆಯಲ್ಲಿದ್ದ ಆಭರಣ ದೋಚಿಕೊಂಡು ಪರಾರಿಯಾಗಿದ್ದ. ಇನ್ನೊಂದು ಮನೆಯಲ್ಲೂ ಇದೇ ಕೃತ್ಯ ಎಸಗಲು ಯತ್ನಿಸಿದಾಗ ಆತನನ್ನು ಬಂಧಿಸಲಾಗಿತ್ತು.