ತಬ್ಲಿಘಿ, ನಂಜನಗೂಡು ನಂಟು – 111 ಜನರ ಕೊರೊನಾ ವರದಿ ಏನಾಯ್ತು?

ಭಾನುವಾರ, 19 ಏಪ್ರಿಲ್ 2020 (22:06 IST)
ತಬ್ಲಿಘಿಗಳು ಹಾಗೂ ನಂಜನಗೂಡಿನ ಬುಬಿಲಂಟ್ ನಂಜಿನ ಸಂಪರ್ಕ ಹೊಂದಿದ್ದ 111 ಜನರ ಪರೀಕ್ಷಾ ವರದಿ ಬಂದಿದೆ.

ಕೊರೊನಾ ಆತಂಕದ ನಡುವೆಯೂ ಮಂಡ್ಯ ಜಿಲ್ಲೆಯ ಜನರು ನಿಟ್ಟುಸಿರುವ ಬಿಡುವ ಫಲಿತಾಂಶ ಬಂದಿದೆ. ಮಳವಳ್ಳಿ ಹಾಗೂ ಮಂಡ್ಯದ 111 ವ್ಯಕ್ತಿಗಳ ವರದಿ ನೆಗೆಟಿವ್ ಬಂದಿದ್ದು, ಒಂದಿಷ್ಟು ಆತಂಕ ದೂರವಾಗಿದೆ.

ತಬ್ಲಿಘಿಗಳು ಹಾಗೂ ನಂಜನಗೂಡಿನ ಜುಬಿಲಂಟ್​ ನಂಜಿನ ಜೊತೆ ಸಂಪರ್ಕ ಹೊಂದಿದ್ದ 111 ಮಂದಿಯ ವರದಿ ನೆಗೆಟಿವ್ ಬಂದಿದೆ. ಒಟ್ಟಾರೆ ಜಿಲ್ಲೆಯ 357 ಮಂದಿ ಫಲಿತಾಂಶ ಜಿಲ್ಲಾಡಳಿತದ ಕೈಗೆ ತಲುಪಿದೆ.

ಮಂಡ್ಯ ಜಿಲ್ಲೆಯ ಫಲಿತಾಂಶ ನೋಡುವುದಾದರೆ:
ಸಂಗ್ರಹಿಸಲಾದ ಒಟ್ಟು ಮಾದರಿಗಳ ಸಂಖ್ಯೆ-482
ದೃಢಪಟ್ಟ ಕೊರೊನಾ ರೋಗಿಗಳು-12
ನೆಗಟಿವ್ ಫಲಿತಾಂಶ-357
ಫಲಿತಾಂಶ ಬರಬೇಕಾದವರ ಸಂಖ್ಯೆ-113
ಕಡ್ಡಾಯ ಗೃಹ ವಾಸ್ತವ್ಯಕ್ಕೆ ಒಳಪಡಿಸಲಾದವರ ಸಂಖ್ಯೆ -196
28 ದಿನಗಳ ಕಡ್ಡಾಯ ಗೃಹ ವಾಸ್ತವ್ಯವನ್ನು ಪೂರ್ಣಗೊಳಿಸಬೇಕಾದವರ ಸಂಖ್ಯೆ -21
ಐಸೋಲೇಷನ್ ವಾರ್ಡ್​ನಲ್ಲಿ ಇರುವವರ ಸಂಖ್ಯೆ -12
ಆಸ್ಪತ್ರೆಯ ಕ್ವಾರಂಟೈನ್​​ ವಾರ್ಡ್​ನಲ್ಲಿ ಇರುವವರ ಸಂಖ್ಯೆ -9
ಹಾಸ್ಟೆಲ್ ಕ್ವಾರಂಟೈನ್‌ನಲ್ಲಿ ಇರುವವರ ಸಂಖ್ಯೆ -13
ಹೋಮ್​ ಕಾರಂನ್‌ಟೈನ್‌ನಲ್ಲಿ ಇರುವವರ ಸಂಖ್ಯೆ -577.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ