ತಾಕತ್‌ ಇದ್ರೆ ಭಜರಂಗದಳ ನಿಷೇಧ ಮಾಡಿ ನೋಡಿ : ಶೋಭಾ ಕರಂದ್ಲಾಜೆ

ಬುಧವಾರ, 3 ಮೇ 2023 (12:16 IST)
ಬೆಂಗಳೂರು : ನಿಮಗೆ ತಾಕತ್ ಇದ್ರೆ ಭಜರಂಗದಳ ನಿಷೇಧ ಮಾಡಿ ನೋಡಿ ಎಂದು ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸವಾಲು ಹಾಕಿದ್ದಾರೆ.
 
ಆರ್ಎಸ್ಎಸ್ನ ಒಂದು ಭಾಗ ಬಿಜೆಪಿ. ಆರ್ಎಸ್ಎಸ್ನ ಯುವಕರ ದಳ ಭಜರಂಗದಳ. ಇವತ್ತು ಭಜರಂಗದಳ ಮತ್ತು ಪಿಎಫ್ಐ ಎರಡನ್ನೂ ಒಂದೇ ತಕ್ಕಡಿಯಲ್ಲಿಟ್ಟಿದೆ ಕಾಂಗ್ರೆಸ್. ದೇಶದ್ರೋಹಿ ಪಿಎಫ್ಐ ಜತೆ ದೇಶಪ್ರೇಮಿ ಭಜರಂಗದಳ ಹೋಲಿಸಿರೋದು ಸರಿಯಲ್ಲ. ನಿಮಗೆ ತಾಕತ್ ಇದ್ದರೆ ಭಜರಂಗದಳ ನಿಷೇಧ ಮಾಡಿ ನೋಡಿ ಎಂದು ಸವಾಲು ಹಾಕಿದ್ದಾರೆ. 

ನೀವು PFIನ್ನು ಭಜರಂಗದಳದ ಜೊತೆ ಹೋಲಿಕೆ ಮಾಡ್ತೀರಾ? ಭಜರಂಗದಳ ಬ್ಯಾನ್ ಮಾಡುವ ನಿಮ್ಮ ಶಕ್ತಿ ತೋರಿಸಿ. ಆಗ ನಾವೂ ದೇಶಾದ್ಯಂತ ತೋರಿಸುತ್ತೇವೆ. ಭಜರಂಗದಳದ ನಿಷೇಧವನ್ನು ಹಿಂದೂ ಸಮಾಜ ಒಪ್ಪಲ್ಲ. ಮುಸಲ್ಮಾನರ ಮುಖವಾಡ ಸಿದ್ದರಾಮಯ್ಯ ಅಂತ ನಾನು ಹಿಂದೆ ಹೇಳಿದ್ದೆ. ಅದು ಇವತ್ತು ಸಾಬೀತಾಗಿದೆ ಎಂದು ಟೀಕಿಸಿದ್ದಾರೆ.

ನಾನೂ ಭಜರಂಗದಳದ ಕಾರ್ಯಕರ್ತೆ. ತಾಕತ್ ಇದ್ರೆ ನನ್ನನ್ನೂ ಅರೆಸ್ಟ್ ಮಾಡಿ ಎಂದು ಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ ಗುಡುಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ