ಕೊರೊನಾ ನಿಯಂತ್ರಣಕ್ಕೆ ಈ ಕೆಲಸ ಮಾಡಿ ಎಂದ ಉಸ್ತುವಾರಿ

ಶನಿವಾರ, 4 ಏಪ್ರಿಲ್ 2020 (20:41 IST)
ದೇಶದಲ್ಲಿ ಕೋವಿಡ್-19 ಸೋಂಕಿನ ಮೊದಲ ಸಾವಿನಿಂದ ಗಮನಸೆಳೆದಿದ್ದ ಕಲಬುರಗಿಯಲ್ಲಿ, ಕೊರೋನಾ ವೈರಸ್ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳು ತೃಪ್ತಿತಂದಿದೆ.

ಮುಂದಿನ ದಿನಗಳಲ್ಲಿ ಈ ಸೋಂಕು ಹರಡದಂತೆ ಇನ್ನಷ್ಟು ಪರಿಣಾಮಕಾರಿಯಾಗಿ ಕ್ರಮ ಕೈಗೊಳ್ಳುವಂತೆ ಮೂಲಸೌಕರ್ಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ಕಲಬುರ್ಗಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕಪಿಲ್ ಮೋಹನ  ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಒಂದು ವೇಳೆ ಕೊರೋನಾ ಪ್ರಕರಣಗಳು ಹೆಚ್ಚಾದಲ್ಲಿ ರೋಗಿಗಳ ಮಾದರಿ  ಪರೀಕ್ಷೆಗಳನ್ನು ನಡೆಸಲು ಜಿಮ್ಸ್‍ನಲ್ಲಿರುವ ಲ್ಯಾಬ್ ಸಾಮಾರ್ಥ್ಯ ಹೆಚ್ಚಿಸಬೇಕೆಂದರು. ಈ ಸಂಬಂಧ ರ್ಯಾಪಿಡ್ ಟೆಸ್ಟಿಂಗ್‍ಗೆ ಬೇಕಾದ ಲ್ಯಾಬ್ ಕಿಟ್‍ಗಳಿಗಾಗಿ ಬೇಡಿಕೆ  ಸಲ್ಲಿಸುವಂತೆ ಅವರು ಜಿಮ್ಸ್ ನಿರ್ದೇಶಕರಿಗೆ ಸೂಚಿಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ