ಲಸಿಕೆ ತೆಗೆದುಕೊಳ್ಳಲು ಹೋಗಲು ಈ ದಾಖಲಾತಿ ಬೇಕು

ಸೋಮವಾರ, 10 ಮೇ 2021 (09:29 IST)
ಬೆಂಗಳೂರು: ಇಂದಿನಿಂದ ರಾಜ್ಯದಲ್ಲಿ 14 ದಿನಗಳ ಕಾಲ ಕಠಿಣ ಲಾಕ್ ಡೌನ್ ವಿಧಿಸಲಾಗಿದೆ. ಹೀಗಾಗಿ ಲಸಿಕೆ ಪಡೆದುಕೊಳ್ಳುವವರು ಏನು ಮಾಡಬೇಕು?


ಅನಗತ್ಯವಾಗಿ ರಸ್ತೆಗಳಲ್ಲಿ ಓಡಾಡುವಂತಿಲ್ಲ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆದರೆ ಕೊರೋನಾ ಲಸಿಕೆ ಪಡೆದುಕೊಳ್ಳಬೇಕಾದರೆ ಅರ್ಹರು ತೆರಳಬಹುದು.

ಆದರೆ ಲಸಿಕೆ ಪಡೆದುಕೊಳ್ಳಲು ಹೋಗುವಾಗ ಲಸಿಕೆಗೆ ನೋಂದಣಿ ಮಾಡಿಕೊಂಡ ಬಳಿಕ ಸಿಗುವ ಅಧಿಕೃತ ಮೊಬೈಲ್ ಸಂದೇಶ ತೋರಿಸುವುದು ಕಡ್ಡಾಯ. ಮೆಡಿಕಲ್ ಎಮರ್ಜೆನ್ಸಿ ಬಿಟ್ಟರೆ ಬೇರೆ ಯಾವುದೇ ಕಾರಣಗಳಿಗೂ ಮನೆಯಿಂದ ಹೊರಬರುವಂತಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ