ಟೀವಿ, ರೇಡಿಯೊದಲ್ಲಿ ಸಂಗೀತ, ಮಹಿಳೆಯರ ಧ್ವನಿಗೆ ತಾಲಿಬಾನ್ ನಿಷೇಧ!

ಭಾನುವಾರ, 29 ಆಗಸ್ಟ್ 2021 (16:03 IST)
ಆಫ್ಘಾನಿಸ್ತಾನ ವಶಪಡಿಸಿಕೊಂಡ ಬೆನ್ನಲ್ಲೇ ತಾಲಿಬಾನಿಗಳು ಒಂದೊಂದಾಗಿ ಕಠಿಣ ನಿಯಮಗಳನ್ನು ಜಾರಿಗೆ ತರುತ್ತಿದ್ದು, ಇದೀಗ ಕಂದಹಾರ್ ನಲ್ಲಿ ರೇಡಿಯೋ ಹಾಗೂ ಟೀವಿ ಚಾನೆಲ್ ಗಳಲ್ಲಿ ಸಂಗೀತ ಹಾಗೂ ಮಹಿಳೆಯರ ಧ್ವನಿಗೆ ನಿಷೇಧ ವಿಧಿಸಿದ್ದಾರೆ.
ಆಗಸ್ಟ್ 15ರಂದು ಆಫ್ಘಾನಿಸ್ತಾದ ಮೇಲೆ ತಾಲಿಬಾನ್ ಹಿಡಿತ ಪಡೆದ ಬೆನ್ನಲ್ಲೇ ಟಿವಿ ಚಾನೆಲ್ ಮತ್ತು ರೇಡಿಯೊಗಳಲ್ಲಿ ಮಹಿಳಾ ಆಂಕರ್ ಗಳನ್ನು ತೆಗೆದು ಹಾಕಲಾಗಿತ್ತು. ರಾಜಧಾನಿ ಕಾಬೂಲ್ ನಲ್ಲಿ ಕೂಡ ಮಹಿಳಾ ಸಿಬ್ಬಂದಿ ಸೇವೆಯಿಂದ ತೆರವುಗೊಳಿಸುವಂತೆ ಮನವಿ ಮಾಡುತ್ತಿದ್ದಾರೆ.
ಇದೇ ವೇಳೆ ಸ್ಪಷ್ಟನೆ ನೀಡಿರುವ ತಾಲಿಬಾನ್ ಮಾಧ್ಯಮಗಳಲ್ಲಿ ಹಾಗೂ ಸ್ಟುಡಿಯೋಗಳಲ್ಲಿ ಮಹಿಳಾ ಸಿಬ್ಬಂದಿ ಇಸ್ಲಾಮಿಕ್ ಕಾನೂನು ಅನ್ವಯ ಕೆಲಸ ಮುಂದುವರಿಸಬಹುದು. ಆದರೆ ಅವರ ಧ್ವನಿ ಕೇಳಬಾರದು ಎಂದು ಹೇಳಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ