ನಾಳೆ ತಮಿಳು ಚಾನೆಲ್‌ಗಳ ಪ್ರಸಾರ ಬಂದ್

ಗುರುವಾರ, 8 ಸೆಪ್ಟಂಬರ್ 2016 (13:38 IST)
ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಪ್ರತಿಭಟಿಸಿ ಕರ್ನಾಟಕ ರಾಜ್ಯ ಕೇಬಲ್ ಆಪರೇಟರ್ಸ್ ಕರ್ನಾಟಕ ಬಂದ್‌ಗೆ ಬೆಂಬಲ ಘೋಷಿಸಿದ್ದು, ತಮಿಳು ಚಾನೆಲ್‌ಗಳನ್ನು ನಾಳೆ ಪ್ರಸಾರ ಮಾಡದಂತೆ ಬಂದ್ ಮಾಡಲಾಗುತ್ತದೆ.

50ರಿಂದ 52 ತಮಿಳುಚಾನೆಲ್‌ಗಳನ್ನು ಪ್ರಸಾರ ಮಾಡದಂತೆ ಬೆಳಿಗ್ಗೆ 6ರಿಂದ ಸಂಜೆ 6ವರೆಗೆ ಬಂದ್ ಮಾಡಲಾಗುತ್ತದೆ. ಇದರಿಂದ ನಮಗೆ ನಷ್ಟವಾದರೂ ನಾಡು, ನುಡಿ, ಜಲದ ವಿಚಾರ ಬಂದಾಗ ನಾವು ಹೋರಾಟದಲ್ಲಿ ಭಾಗಿಯಾಗುತ್ತೇವೆ ಎಂದು ಕೇಬಲ್ ಆಪರೇಟ್ಸ್ ಅಸೋಸಿಯೇಷನ್ ಅಧ್ಯಕ್ಷ ಪ್ಯಾಟ್ರಿಕ್ ರಾಜು ಹೇಳಿದರು.

ಕೇಬಲ್ ಆಪರೇಟರ್‌ಗಳು ಕೂಡ ನಾಳೆ ರಾಲಿಯಲ್ಲಿ ಭಾಗವಹಿಸಲು ನಿರ್ಧರಿಸುವ ಮೂಲಕ ಬಂದ್‌ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ