ಬಿಜೆಪಿಯಿಂದಲೂ ಟಾರ್ಗೆಟ್ ಸಿದ್ದರಾಮಯ್ಯ!

ಸೋಮವಾರ, 14 ನವೆಂಬರ್ 2022 (14:03 IST)
ಬೆಂಗಳೂರು : ಕೋಲಾರದ ಪಿಚ್ ಟೆಸ್ಟ್ ಮಾಡಿ ಸ್ಪರ್ಧೆ ಘೋಷಣೆ ಮಾಡಿದ ಸಿದ್ದರಾಮಯ್ಯಗೆ ಖೆಡ್ಡಾ ತೋಡಲು ಉರುವಾದಂತಿದೆ.

ಸಿದ್ದರಾಮಯ್ಯ ಎಲ್ಲೇ ನಿಂತ್ರು ನಾನು ಬಿಡೊಲ್ಲ ಅಂತ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಘೊಷಣೆ ಮಾಡಿದ್ರಾ ಅನ್ನೋ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

ಹೌದು. ಸಮ್ಮಿಶ್ರ ಸರ್ಕಾರ ಬೀಳಿಸಿದ ಹಾಗೂ ತುಮಕೂರಿನಲ್ಲಿ ತಂದೆ ಸೋಲಿನ ಸೇಡು ತೀರಿಸಿಕೊಳ್ಳೊಕೆ ಕುಮಾರಸ್ವಾಮಿ ಪ್ಲಾನ್ ಮಾಡಿದ್ದಾರೆ. ಸಿದ್ದರಾಮಯ್ಯ ಕೋಲಾರದಲ್ಲಿ ನಿಂತ್ರೆ ಜೆಡಿಎಸ್ ನಿಂದ ಕುಮಾರಸ್ವಾಮಿಯೇ ನೇರವಾಗಿ ಪ್ರಚಾರ ಕಣಕ್ಕೆ ಎಂಟ್ರಿ ಕೊಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. 

ಈಗಾಗಲೇ ಅಭ್ಯರ್ಥಿ ಫೈನಲ್ ಆಗಿದ್ದಾರೆ ಅಂತ ಘೋಷಣೆ ಮಾಡಿರೋ ಕುಮಾರಸ್ವಾಮಿ, ಯಾರೇ ಬಂದರೂ ಅದೇ ಅಭ್ಯರ್ಥಿ ಫಿಕ್ಸ್ ಎಂದಿದ್ದಾರೆ. ಈ ಬಾರಿ ಕೋಲಾರದಲ್ಲಿ ಗೆಲುವು ನಮ್ಮದೇ ಅಂತ ಘೋಷಣೆ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ