ಸಂಘಟನೆಯಿಂದ ಸಹಾಯ ಮಾಡುವುದಾಗಿ ಬಂದು ಮೋಸ ಮಾಡುವ ಖಾತರ್ನಾಕ್

ಶನಿವಾರ, 24 ಸೆಪ್ಟಂಬರ್ 2022 (15:51 IST)
ಮಾನವ ಹಕ್ಕುಗಳ ರಕ್ಷಣೆ ಮಾಡುತ್ತೇನೆ ಎಂದು ಅಮಾಯಕರಿಗೆ ಸಹಾಯ ಮಾಡುವ ನೆಪದಲ್ಲಿ ಸುಲಿಗೆ ಮಾಡುತ್ತಿದ್ದ. ಗಂಡ ತುಂಬಾ ಕಿರುಕುಳ ನೀಡುತ್ತಿದ್ದಾನೆ ಎಂದು ಪ್ರತಿಭಾ ಎಂಬಾಕೆ ಬೆಳ್ಳಂದೂರು ಪೊಲೀಸ್ ಠಾಣೆ ಮೆಟ್ಟಿಲೇರಿದ್ರು. ಪೊಲೀಸರು ಗಂಡ-ಹೆಂಡತಿ ಜಗಳ ಎಂದು ಬುದ್ದಿವಾದ ಹೇಳಿ ಕಳುಹಿಸಿದ್ದರು. ಇಷ್ಟಾದ್ರೂ ಸುಮ್ಮನಿರದ ಪ್ರತಿಭಾ ಪತಿ ಜನರ್ಧಾನ ಆಸ್ತಿಗಾಗಿ ಆಕೆಗೆ ಇನ್ನಿಲ್ಲದ ಹಿಂಸೆ ನೀಡಿತ್ತಿದ್ದ. ಆದರೆ ಪೊಲೀಸರು ಮಾತ್ರ ಎಫ್‍ಐಆರ್ ದಾಖಲಿಸಿರಲಿಲ್ಲ. ಇದರಿಂದ ನೊಂದಿದ್ದ ಪ್ರತಿಭಾಗೆ ಸಂಘಟನೆ ಹೆಸರಲ್ಲಿ ಪಕ್ಕದ ಮನೆ ರಾಣಿ ಮೂಲಕ ಪ್ರಕಾಶ್ ಮೂರ್ತಿ ಪರಿಚಯವಾಗಿದ್ದ.
ಪ್ರಕಾಶ್, ನಿನೊಬ್ಬಳೇ ಸ್ಟೇಷನ್‍ಗೆ ಹೋದ್ರೆ ಏನು ಆಗಲ್ಲ.. ನಾಳೆ ನನ್ನೊಂದಿಗೆ ಬಾ ಅಂತಾ ಕರೆದುಕೊಂಡು ಸೀದಾ ಕಮಿಷನರ್ ಕಚೇರಿ ಬಾಗಿಲು ತಟ್ಟಿದ್ದ. ಕಮಿಷನರ್ ಹೇಳಿದ್ದಕ್ಕೋ‌ ಏನೋ ಬೆಳ್ಳಂದೂರು ಪೊಲೀಸರು ಪ್ರತಿಭಾ ಗಂಡನ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ಜನಾರ್ಧನ್ ಬಂಧಿಸಿ ಜೈಲಿಗೆ ಕಳಿಸಿದ್ದರು. ಅಷ್ಟೇ ಅಲ್ಲದೇ ಜನರ್ದಾನ್‍ಗೆ ಅತ್ತೆ ಕೊಡಿಸಿದ್ದ ಕಾರು, ಆಭರಣಗಳನ್ನು ಪ್ರತಿಭಾಗೆ ಪ್ರಕಾಶ್ ವಾಪಸ್ ಕೊಡಿಸಿದ್ದ.
 
ಪ್ರತಿಭಾ ಗಂಡ ಜೈಲಿಗೆ ಹೋಗುತ್ತಿದ್ದಂತೆ ಪ್ರಕಾಶನ ಅಸಲಿ ಮುಖ‌ ಪ್ರದರ್ಶನವಾಗಿತ್ತು. ನಿನ್ನ ಕೇಸ್ ದಾಖಲಿಸಲು ಹಾಗೂ ನಿನ್ನ ಗಂಡನ ವಿರುದ್ಧ ಕ್ರಮ ಕೈಗೊಳ್ಳಲು ಸಹಾಯ ಮಾಡಿದ್ದು ನಾನು. ಹೀಗಾಗಿ ನನಗೆ 5 ಲಕ್ಷ ರೂ. ಹಣ ನೀಡುವಂತೆ ಪ್ರಕಾಶ್ ಒತ್ತಾಯಿಸಿದ್ದ. ಇದಕ್ಕೆ ಪ್ರತಿಯಾಗಿ ಹಾಗೋ‌ಹೀಗೋ ಮಾಡಿ ಪ್ರತಿಭಾ ತಾಯಿ ಸುಮಾರು 1.75 ಲಕ್ಷ ರೂ. ಹಣ ಹೊಂದಿಸಿ ಕೊಟ್ಟಿದ್ರು. ಇಷ್ಟಕ್ಕೆ ಸುಮ್ಮನಾಗದ ಪ್ರಕಾಶ್ ಹಣ ನೀಡದಿದ್ರೆ ನಿನ್ನ ಗಂಡನ ಪರ ನಿಂತು ನಿಮ್ಮ ಮೇಲೆ ಕೇಸ್ ಹಾಕಿಸೋದಾಗಿ ಬೆದರಿಕೆ ಹಾಕಿದ್ದ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ