ಸಾಧ್ಯವಿರುವ ಪ್ರತಿ ಹಂತದಲ್ಲೂ ತನ್ನನ್ನು ಹೇಗೆ ಕೆಳಮಟ್ಟಕ್ಕಿಳಿಸಲಾಯಿತು ಎಂದು ಮೆಸೇಜ್‌ನಲ್ಲಿ ಹರಿಹಾಯ್ದಿದ್ದು, ಮುಂದಿನ ಬಾರಿ, ದಯವಿಟ್ಟು ಬೇರೆಯವರಿಗೆ ದಯೆ ತೋರಲು ಮರೆಯದಿರಿ. ವಿಶೇಷವಾಗಿ ನಿಮ್ಮ ಸಹಾಯವನ್ನು ಬಯಸುವ ವಿದ್ಯಾರ್ಥಿಗಳಿಗೆ ಎಂದು ಮಾತಿನಲ್ಲೇ ತಿವಿಯಲಾಗಿದೆ.
ತಾನು ಉತ್ತೀರ್ಣ ಆಗುವುದೇ ಇಲ್ಲ ಎಂದಿದ್ದಿರಿ, ಆದರೆ ಕ್ಲಾಸ್ 12 ಕೂಡ ಪಾಸ್ ಆಗಿದ್ದು, ವಿಶ್ವವಿದ್ಯಾಯದಲ್ಲಿ ಕೂಡ ಪ್ರವೇಶ ಸಿಕ್ಕಿದೆ ಎಂದು ಶಿಕ್ಷಕಿಯನ್ನು ಕೆಣಕಲಾಗಿದೆ.
ಸ್ಕ್ರೀನ್ ಶಾಟ್ ವೈರಲ್ ಆಗಿದ್ದು, ನೂರಾರು ಮಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಒಬ್ಬರು ಪ್ರತಿಕ್ರಿಯಿಸಿ ನನಗೆ 5 ವರ್ಷ ವಯಸ್ಸಿದ್ದಾಗ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ. ಓದುವುದಿಲ್ಲ ಎಂದು ಭಾವಿಸಿ ಕಾನ್ವೆಂಟ್‌ನಲ್ಲಿ ಪ್ರತಿದಿನ ನನ್ನನ್ನು ಹೊಡೆಯಲಾಗುತ್ತಿತ್ತು. ನಾನೇ ಶಿಕ್ಷಕನಾದೆ, ನನ್ನಂತೆಯೇ ಇರುವ ಮಕ್ಕಳು ಎಂದಿಗೂ ಅವಮಾನ ಸಹಿಸಲ್ಲ ಎಂಬುದು ನನಗೆ ಅರ್ಥವಾಗಿದೆ ಎಂದಿದ್ದಾರೆ.