ಓದದ ವಿದ್ಯಾರ್ಥಿನಿಗೆ ಹೊಡೆದು ಗಾಯ ಮಾಡಿದ್ಕಕ್ಕೆ ಶಿಕ್ಷಕಿಗೆ ಮೂರು ವರ್ಷ ಜೈಲು
2011 ರಲ್ಲಿ ಘಟನೆ ನಡೆದಿತ್ತು. ವಿದ್ಯಾರ್ಥಿನಿ ಸರಿಯಾಗಿ ಓದಲಿಲ್ಲವೆಂದು ಆಕೆಯ ಕಣ್ಣಿಗೆ ಹೊಡೆದಿದ್ದರಿಂದ ಕಣ್ಣಿಗೆ ಗಂಭೀರ ಗಾಯವಾಗಿತ್ತು. ಪ್ರಕರಣ ಕುರಿತಂತೆ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.
ಈ ಸಂಬಂಧ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಅದರಂತೆ ನ್ಯಾಯಾಲಯ ವಿದ್ಯಾರ್ಥಿನಿ ಮೇಲೆ ಹಲ್ಲೆ ಮಾಡಿದ ತಪ್ಪಿಗೆ ಶಿಕ್ಷಕಿಗೆ ಜೈಲು ಶಿಕ್ಷೆ ವಿಧಿಸಿದೆ.