ಇಂಟರ್ನೆಟ್ ರಿಪೇರಿಗೆ ಬಂದ ಟೆಕ್ನಿಶಿಯನ್ ಮಹಿಳೆ ಮೇಲೆಎರಗಿದ್ದ

ಶುಕ್ರವಾರ, 28 ಏಪ್ರಿಲ್ 2017 (17:17 IST)
ಇಂಟರ್ನೆಟ್ ಕನೆಕ್ಷನ್ ಸರಿಮಾಡಲು ಬಂದ ಟೆಕ್ನಿಷಿಯನ್ ಮಹಿಳೆಯನ್ನ ತಳ್ಳಿ ಲೈಂಗಿಕ ಕಿರುಕುಳಕ್ಕೆ ಯತ್ನಿಸಿರುವ ಘಟನೆ ಬೆಂಗಳೂರಿನ ಆರ್.ಟಿ.ನಗರದಲ್ಲಿ ನಡೆದಿದೆ. ಏರ್ ಟೆಲ್ ಟೆಕ್ನಿಷಿಯನ್ ಎನ್ನಲಾದ ಪ್ರಭಾಕರ್ ವಿರುದ್ಧ ಇಂತದ್ದೊಂದು ಆರೋಪ ಕೇಳಿಬಂದಿದೆ.

ಏಪ್ರಿಲ್ 23ರಂದು ಬೆಳಗ್ಗೆ 10.30ರ ಸುಮಾರಿಗೆ ಇಂಟರ್ನೆಟ್ ಕನೆಕ್ಷನ್ ರಿಪೇರಿಗೆ ಮನೆಗೆ ಬಂದ ಪ್ರಭಾಕರ್ ಕೆಲಸ ಮುಗಿಸಿ ತೆರಳಿದ್ದಾನೆ. ಮೊಬೈಲ್ ಮರೆತುಹೋಗಿದ್ದ ಪ್ರಭಾಕರ್ 11 ಗಂಟೆಗೆ ಮತ್ತೆ ಮಹಿಳೆ ಮನೆಗೆ ಬಂದಿದ್ದಾನೆ. ಮೊಬೈಲ್ ತೆಗೆದುಕೊಂಡು ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಮಹಿಳೆಯನ್ನ ಗೋಡೆಗೆ ತಳ್ಳಿದ ಟೆಕ್ನಿಷಿಯನ್ ಮೈ ಕೈ ಮುಟ್ಟಿ ಅಸಭ್ಯ ವರ್ತನೆ ತೋರಿದ್ದಾನೆ. ಅಶ್ಲೀಲ ಪದಗಳನ್ನ ಬಳಸಿ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಅಗಿದೆ. ಪ್ರಕರಣ ಸಂಬಂಧ ಆರ್.ಟಿ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳಗ್ಗೆ ಸಂದರ್ಭದಲ್ಲೇ ಮನೆಗೆ ನುಗ್ಗಿ ನಡೆಸಿರುವ ಈ ಲೈಂಗಿಕ ದೌರ್ಜನ್ಯಕ್ಕೆ ನಗರ ಬೆಚ್ಚಿಬಿದ್ದಿದೆ. ಐಪಿಸಿ ನ್ಸೆ 354ರಡಿ ಕೇಸ್ ದಾಖಲಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ