ಬೆಂಗಳೂರು: ಮಾಜಿ ಸಿಎಂ ಸಿದ್ಧರಾಮಯ್ಯ ತಮ್ಮ ಪಕ್ಷದ ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿದ್ದನ್ನ ಪ್ರಸ್ತಾಪಿಸಿ ವಿಪಕ್ಷ ನಾಯಕ ಆರ್.ಅಶೋಕ್ ಅವರು ಯತೀಂದ್ರ ಅವರಲ್ಲಿ ನಿಮ್ಮಪ್ಪನ ದರ್ಪಕ್ಕೆ ಯಾವುದಾದರೂ ಮದ್ದು ಇದ್ದರೆ ಬರೆದುಕೊಡಿ ಎಂದು ತಿರುಗೇಟು ನೀಡಿದರು.
ನಿನ್ನೆ ಚುನಾವಣಾ ಪ್ರಚಾರದ ವೇಳೆ ಯತೀಂದ್ರ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಒಬ್ಬ ಗೂಂಡಾ, ರೌಡಿ. ಅಂತವರನ್ನು ಪ್ರಧಾನಿ ಮೋದಿ ಅವರು ತಮ್ಮ ಪಕ್ಕದಲ್ಲಿ ಕೂರಿಸಿಕೊಂಡಿದ್ದಾರೆ. ಗುಜರಾತ್‌ನಲ್ಲಿ ಅವರ ಮೇಲೆ ಕೊಲೆ ಆರೋಪವಿದೆ ಎಂದು ಗಂಭೀರ ಆರೋಪ ಮಾಡಿದ್ದರು.
ಇದಕ್ಕೆ ಎಕ್ಸ್‌ನಲ್ಲಿ ಆರ್.ಅಶೋಕ್ ಅವರು ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಆರ್.ಅಶೋಕ್ ಅವರು ಸಿಎಂ ಸಿದ್ದರಾಮಯ್ಯ ನಡವಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಕ್ಸ್‌ನಲ್ಲಿ ಬರೆದುಕೊಂಡಿರುವ ಅವರು, ಸದನದಲ್ಲಿ ಪೊಲೀಸರನ್ನು ಬೆದರಿಸುವುದು, ಸ್ಪೀಕರ್ ಗೆ ಧಮ್ಕಿ ಹಾಕುವುದು, ಮಹಿಳೆಯರ ಬಟ್ಟೆ ಎಳೆದು ದೌರ್ಜನ್ಯ ಮಾಡುವುದು, ಕಾರ್ಯಕರ್ತರ ಕಪಾಳಕ್ಕೆ ಹೊಡೆಯುವುದು Mr.ಯತೀಂದ್ರ ಅವರೇ, ನಿಮ್ಮ ತಂದೆ @siddaramaiah ನವರು ಗೂಂಡಾಗಿರಿ ಪ್ರದರ್ಶನ ಮಾಡಿರುವ ಇಂತಹ ದೃಶ್ಯಗಳು ಇಂಟರ್ ನೆಟ್ ನಲ್ಲಿ ಸಾಕಷ್ಟಿವೆ. ಹಲೋ ಅಪ್ಪ, ಗೂಂಡಾಗಿರಿ ಬಿಟ್ಟುಬಿಡಿ ಅಂತ ಸ್ವಲ್ಪ ಬುದ್ಧಿ ಹೇಳಿ, ಈ ದರ್ಪಕ್ಕೆ ಯಾವುದಾದರೂ ಔಷಧಿ ಇದ್ದರೆ ಬರೆದು ಕೊಡಿ ಎಂದು ಹೇಳಿದ್ದಾರೆ.