ಟಿಇಟಿ ಪರೀಕ್ಷೆ ಮಾರ್ಚ್ 29ಕ್ಕೆ ಮುಂದೂಡಿಕೆ

ಗುರುವಾರ, 12 ಮಾರ್ಚ್ 2020 (14:36 IST)

ಕರ್ನಾಟಕ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆಯು ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯ ದಿನಾಂಕವನ್ನು ಮುಂದೂಡಿಕೆ ಮಾಡಿದೆ.
 

24.01.2020 ರಂದು ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (KAR TET-2019) ಗೆ ನೋಟಿಫಿಕೇಷನ್ ಪ್ರಕಟಿಸಿತ್ತು. ಆನ್ ಲೈನ್ ಮೂಲಕ ಅರ್ಜಿಸಲ್ಲಿಸಲು 25.02.2020ರಂದು ಕೊನೆ ದಿನವಾಗಿತ್ತು. 15.03.2020 ರಂದು ಪರೀಕ್ಷೆ ನಡೆಸುವುದಾಗಿ ತಿಳಿಸಿತ್ತು. ಇದೀಗ ಪರೀಕ್ಷೆಯನ್ನು ಮಾರ್ಚ್ 29, 2020ಕ್ಕೆ ಮುಂದೂಡಿಕೆ ಮಾಡಲಾಗಿದೆ.

ಮಾರ್ಚ್ 29, 2020ರಂದು ಪರೀಕ್ಷೆ ನಡೆಸಲಾಗುತ್ತದೆ. ಆಡಳಿತಾತ್ಮಕ ಕಾರಣಾಂತರಗಳಿಂದ ಮಾರ್ಚ್ 29 ಕ್ಕೆ ಪರೀಕ್ಷೆ ಮುಂದೂಡಲಾಗಿದೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ