15 ನೇ ಬಜೆಟ್ ದೇಶಕ್ಕೆ ಮಾದರಿ ಬಜೆಟ್ ಯಾಗಿದೆ- ಡಿಕೆಶಿ

geetha

ಶುಕ್ರವಾರ, 16 ಫೆಬ್ರವರಿ 2024 (21:00 IST)
ಬೆಂಗಳೂರು-ನಗರದ ವಿಧಾನಸೌದದಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ ಮೊದಲು ನಾನು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸ್ತೇನೆ.15 ನೇ ಬಜೆಟ್ ದೇಶಕ್ಕೆ ಮಾದರಿ ಬಜೆಟ್ ಯಾಗಿದ್ದು,ಈ ಬಜೆಟ್ ಆತ್ಮವಿಶ್ವಾಸ ಎಷ್ಟಿತ್ತು ಅಂದ್ರೆ, ವಿಪಕ್ಷಗಳು ಕೂರಲಿಲ್ಲ.ಇಷ್ಟು ಅಭಿವೃದ್ಧಿ ಮಾಡಿದ್ರಲ್ಲಾ ಅಂತ ಕೈ ಹೊಸಕಿಕೊಂಡು ಹೊರಗೆ ಹೋದ್ರು.81ರಿಂದ ಅಸೆಂಬ್ಲಿಯಲ್ಲಿ ಇದ್ದೀನಿ‌.ಯಾವುದೇ ವಿಪಕ್ಷಗಳು ಆಡಳಿತ ಮಾಡಿದ್ದಾರೆ.ಯಾರೂ ಕೂಡ ಬಜೆಟ್ ಬಾಯ್ಕಾಟ್ ಮಾಡಿ ಹೊರಗೆ ಬಂದಿದ್ದಾರೆ.

ಬಾಯ್ಕಾಟ್ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಅಪಮಾನ,ಬಜೆಟ್ ಪಾಸ್ ಮಾಡಿಲ್ಲ.ಸರ್ಕಾರಿ ನೌಕರರಿಗೆ ಸಂಬಳ ಕೊಡಬೇಕು,ಮಹಿಳೆಯರಿಗೆ 2 ಸಾವಿರ ಕೊಡಬೇಕು.ಮನೆಗೆ ವಿದ್ಯುತ್ ಶಕ್ತಿ ನೀಡಬೇಕು.ಎಲ್ಲೆಡೆ ಉಚಿತವಾಗಿ ಬಸ್ಸಲ್ಲಿ ಓಡಾಡ್ತಿದ್ದಾರೆ ಅವರಿಗೆ ಅವಮಾನ ಮಾಡಿದ್ದಾರೆ.ರಾಜ್ಯದ ಜನತೆಗೆ ಅವಮಾನ ಮಾಡಿದ ವಿಶೇಷ ಪ್ರಕರಣ ನಡೆದಿದೆ.ಎಲ್ಲಾ ಬಿಜೆಪಿ, ಜೆಡಿಎಸ್‌ ಶಾಸಕರು ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆ ಎಂದು ಡಿಸಿಎಂ ಡಿಕೆಶಿವಕುಮಾರ್ ಹೇಳಿದ್ದಾರೆ.
 
ನಮ್ಮದು ಬದುಕನ್ನ ಕಟ್ಟಿಕೊಡುವ ಬಜೆಟ್ ಇಷ್ಟು ದೊಡ್ಡ ಗಾತ್ರದ ಬಜೆಟ್ ದೃಷ್ಟಿ ಕೋನ ಯಾರೂ ಮಾಡಿಲ್ಲ.ನೀರಾವರಿ ಇಲಾಖೆಗೆ ಬಹಳ ಸಿಕ್ಕಿದೆ.ನವಿಲೆ, ಕೃಷ್ಣಾ ಮೇಲ್ದಂಡೆ, ಕಳಸಾ ಬಂಡೂರಿ ಕೇಂದ್ರ ಅನುಮೋದನೆ ನೀಡದಿದ್ರೂ ಟೆಂಡರ್ ಕರೆದಿದ್ದೇವೆ.ಮೇಕೆದಾಟು ಯೋಜನೆಗೆ ಹಣ ಮೀಸಲಿಟ್ಟಿದ್ದೇವೆ.ಬೆಂಗಳೂರು ಹೊರ ವಲಯದಲ್ಲಿ ಐದು ಟೌನ್ ಶಿಪ್ ಮಾಡಿ, ಬೆಂಗಳೂರು ಕನ್ಜಸ್ಟ್ ಕಡಿಮೆ ಮಾಡಿದ್ದೇವೆ‌.ಬೆಂಗಳೂರನ್ನ ಟೂರಿಸಂ ಡೆವಲಪ್ಮೆಂಟ್ ಮಾಡಲು ನಿರ್ಧರಿಸಿದ್ದೇವೆ.ನಮ್ಮಲ್ಲಿರೋ ಆರ್ಥಿಕ ಶಕ್ತಿ, ಆರ್ಥಿಕ ಶಿಸ್ತಿನ ಮೇಲೆ ಸಾಲ ಮಾಡಿದ್ದೇವೆ ಅಂತ ಡಿಸಿಎಂ ಡಿಕೆ ಶಿವಕುಮಾರ್ ಸಮರ್ಥನೆ ಮಾಡಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ