ರಾಜ್ಯದ ಈ ಜಿಲ್ಲೆಯಲ್ಲಿ 2 ನೇ ಕೊರೊನಾ ಕೇಸ್ ಪತ್ತೆ

ಸೋಮವಾರ, 18 ಮೇ 2020 (16:16 IST)
ಬರೋಬ್ಬರಿ 60 ದಿನಗಳ ಬಳಿಕ ರಾಜ್ಯದ ಈ ಜಿಲ್ಲೆಯಲ್ಲಿ 2ನೇ ಕೊರೊನಾ ವೈರಸ್ ಕೇಸ್ ಪತ್ತೆಯಾಗಿದೆ.

ಮಾರ್ಚ್ 17 ರಂದು ಮೊದಲ ಕೊರೊನಾ ಸೋಂಕು ಪ್ರಕರಣ ವರದಿಯಾಗಿದ್ದ ಕೊಡಗು ಜಿಲ್ಲೆಯಲ್ಲಿ ತದನಂತರ ಸೋಂಕಿತ ವ್ಯಕ್ತಿ ಗುಣಮುಖರಾಗಿದ್ದರು. ತರುವಾಯ ಕೊಡಗಿನಲ್ಲಿ ಯಾವುದೇ ಸೋಂಕು ಪ್ರಕರಣ ವರದಿಯಾಗಿರಲಿಲ್ಲ. ಆದರೆ ಇದೀಗ ಮತ್ತೆ ಹೊಸ ಕೇಸ್ ವರದಿಯಾಗಿರುವುದು  ಜಿಲ್ಲೆಯಲ್ಲಿ ಮತ್ತಷ್ಟು ಕಟ್ಟೆಚ್ಚರಕ್ಕೆ ಕಾರಣವಾಗಲಿದೆ.

ಮಡಿಕೇರಿ ತಾಲೂಕಿನ ಮಹಿಳೆಯೋವ೯ರಿಗೆ ಕೊರೊನಾ ಸೋಂಕು ತಗುಲಿದೆ ಎಂದು ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

ಮುಂಬೈನಲ್ಲಿ ಹೋಂ ನಸ್೯ ಆಗಿರುವ 45 ವಷ೯ದ ಮಹಿಳೆ ಮೇ 15 ರಂದು ಮಂಗಳೂರು ಮೂಲಕ ಕೊಡಗಿಗೆ ಬಂದಿದ್ದರು. ಈ ಸಂದಭ೯ ಕೊಡಗು ಜಿಲ್ಲಾ ಚೆಕ್ ಪೋಸ್ಟ್ ನಲ್ಲಿ ವೈದ್ಯಕೀಯ ತಪಾಸಣೆಗೊಳಪಿಡಿಸಿದಾಗ ಮಹಿಳೆಗೆ ಜ್ವರ, ಶೀತವಿರುವುದು ತಿಳಿದುಬಂತು. ಕೂಡಲೇ ಸಂಪಾಜೆ ಚೆಕ್ ಪೋಸ್ಟ್ ನಿಂದ ಮಹಿಳೆಯನ್ನು ಸಕಾ೯ರಿ ಅ್ಯಂಬ್ಯುಲೆನ್ಸ್ ನಲ್ಲಿ ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಯಿತು.

ಕೋರೋನಾ ಸೋಂಕಿರುವ ವರದಿ ಲಭಿಸಿದ್ದು ಚಿಕಿತ್ಸೆ ಮುಂದುವರೆಸಲಾಗಿದೆ.
ಮಹಿಳೆ ಮಂಗಳೂರಿನಿಂದ ಸಂಪಾಜೆಯವರೆಗೂ ಬಂದಿದ್ದ ಕಾರ್ ಚಾಲಕ ಮತ್ತು ಚೆಕ್ ಪೋಸ್ಟ್ ನಲ್ಲಿ ಸಂಪಕ೯ದಲ್ಲಿದ್ದ ವ್ಯಕ್ತಿಯೋವ೯ರನ್ನು ಕೊರಂಟೈನ್ ಗೆ ಒಳಪಡಿಸಲಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ