ಇದರಿಂದ ಆಕ್ರೋಶಗೊಂಡ ಅಮರೇಗೌಡ, ಪ್ರಿಯತಮೆ ಶಹಾನಾಬೇಗಂ ಕುತ್ತಿಗೆಗೆ ಚಾಕುವಿನಿಂದ ಕುತ್ತಿಗೆಗೆ ಇರಿದು ಗಾಯಗೊಳಿಸಿದ್ದಾನೆ. ನಂತರ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಪ್ರಯತ್ನಿಸಿದ್ದಾನೆ. ಪುತ್ರಿಯನ್ನು ರಕ್ಷಿಸಲು ಬಂದ ತಾಯಿಗೂ ಬೆಂಕಿ ಹಚ್ಚಿದ್ದರಿಂದ ಗಂಭೀರವಾದ ಸುಟ್ಟ ಗಾಯಗಳಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆತ್ಮಹತ್ಯೆಗೆ ಯತ್ನಿಸಿರುವ ಅಮರೇಗೌಡ
ಆರೋಪಿ ಅಮರೇಗೌಡ ಕೃತ್ಯವೆಸಗಿದ ಸ್ಥಳದಿಂದ ಪರಾರಿಯಾಗಿ ಗಂಗಾವತಿಯ ಹುಳ್ಕಿಹಾಳ್ ಗ್ರಾಮದ ಹೊರವಲಯದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ. ಕೂಡಲೇ ಸ್ಥಳೀಯರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.