ಎ.ಕೃಷ್ಣಪ್ಪರನ್ನು ಜೆಡಿಎಸ್ ನವರೇ ಕೊಂದ್ರು ಎಂದ ಬಿಜೆಪಿ ಮುಖಂಡ

ಮಂಗಳವಾರ, 19 ಮಾರ್ಚ್ 2019 (14:00 IST)
ಕಳೆದ ಲೋಕಸಭಾ ಚುನಾವಣೆಯ ಜೆ.ಡಿ.ಎಸ್ ಅಭ್ಯರ್ಥಿ ಎ.ಕೃಷ್ಣಪ್ಪರನ್ನು ಜನತಾ ದಳದ ಮುಖಂಡರೇ ಅನ್ಯಾಯ ವಾಗಿ ಕೊಂದಿದ್ದಾರೆ ಅಂತ ಬಿಜೆಪಿ ಸಂಭಾವ್ಯ ಅಭ್ಯರ್ಥಿ ಗಂಭೀರ ಆರೋಪ ಮಾಡಿದ್ದಾರೆ.

ಅಂದು ಜೆ.ಡಿ.ಎಸ್.ರಾಜ್ಯಾಧ್ಯಕ್ಷರೂ ಆದ ಎ.ಕೃಷ್ಣಪ್ಪರನ್ನ ಗೆಲ್ಲಿಸ್ತೇವೆ ಅಂತಾ ತುಮಕೂರಿಗೆ ಕರೆದುಕೊಂಡು ಬಂದು ಅವರ ಸಾವಿಗೆ ಕಾರಣರಾಗಿದ್ದಾರೆ. ಜಾತಿ ಪ್ರೇಮ ಮೆರೆದ ಜೆ.ಡಿ.ಎಸ್ ನ ಒಕ್ಕಲಿಗ ಮುಖಂಡರು ಅಂದು ಲಕ್ಕಪ್ಪ, ಇಂದು ಮುದ್ದಹನುಮೇಗೌಡ ಎಂದು ಕರಪತ್ರ ಹಂಚಿ ಕಾಂಗ್ರೆಸ್ ನ ಮುದ್ದಹನುಮೇಗೌಡರ ಪರ ಮತಯಾಚನೆ ಮಾಡಿದ್ರು. ಈ ಮುಖೇನ ಯಾದವ ಸಮುದಾಯದ ಮುಖಂಡ ಎ.ಕೃಷ್ಣಪ್ಪರನ್ನ ಬಲಿತೆಗೆದುಕೊಂಡರು ಎಂದು ಜಿ.ಎಸ್.ಬಸವರಾಜು ಆಪಾದಿಸಿದ್ದಾರೆ.

ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಸಂಭಾವ್ಯ ಅಭ್ಯರ್ಥಿ ಜಿ.ಎಸ್.ಬಸವರಾಜು ಜೆ.ಡಿ.ಎಸ್ ವಿರುದ್ಧ  ಹರಿಹಾಯ್ದಿದ್ದಾರೆ. ಕಳೆದ ಲೋಕಸಭಾ ಚುನಾವಣೆಯ ಜೆ.ಡಿ.ಎಸ್ ಅಭ್ಯರ್ಥಿ ಎ.ಕೃಷ್ಣಪ್ಪರನ್ನು ಜನತಾ ದಳದ ಮುಖಂಡರೇ ಅನ್ಯಾಯವಾಗಿ ಕೊಂದಿದ್ದಾರೆ ಎಂದು ಜಿ.ಎಸ್.ಬಸವರಾಜು ಗಂಭೀರ ಆರೋಪ ಮಾಡಿದ್ದಾರೆ. ಮತದಾನದ ದಿನವೇ ಎ.ಕೃಷ್ಣಪ್ಪ ನನ್ನ ಮನೆಗೆ ಬಂದಿದ್ರು. ಪಕ್ಷದ ಯಾವ ಶಾಸಕನೂ ನನ್ನ ಪರ ಕೆಲಸ ಮಾಡಿಲ್ಲ. ನನ್ನ ಇಲ್ಲಿಗೆ ತಂದು ಪರದೇಶಿ ಮಾಡಿದ್ರು ಎಂದು ಕಣ್ಣೀರು ಹಾಕಿದ್ರು. ನಾನು ಸಂತೈಸಿಸಿ ಕಳುಹಿಸಿದ್ದೆ. ಈ ಕೊರಗಿನಲ್ಲೇ ಇದ್ದ ಕೃಷ್ಣಪ್ಪ ಮತದಾನ ನಡೆದ  ಎರಡೇ ದಿನದಲ್ಲಿ ಹೃದಯಾಘಾತದಿಂದ ಸಾವನಪ್ಪಿದ್ರು ಎಂದು ಬಸವರಾಜು ಜೆ.ಡಿ.ಎಸ್ ವಿರುದ್ಧ ಆರೋಪ ಮಾಡಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ